(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.03. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಎಸ್ಸಾರ್ಟಿಸಿ ಹೆಸರು ಕೇರಳ ರಾಜ್ಯದ ಆಸ್ತಿಯಾಗಿದ್ದು, ಇನ್ಮುಂದೆ ಕರ್ನಾಟಕ ರಾಜ್ಯವು ಕೆಎಸ್ಸಾರ್ಟಿಸಿ ಬಳಸುವಂತಿಲ್ಲ ಎಂದು ಕೇಂದ್ರ ಸರ್ಕಾರದ ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯು ಆದೇಶ ಹೊರಡಿಸಿದೆ.
ಕೇರಳ ರಾಜ್ಯವು 1965 ರಿಂದಲೇ ಕೆಎಸ್‌ಆರ್ಟಿಸಿ ಹೆಸರನ್ನು ಬಳಸುತ್ತಿದ್ದು, ಕರ್ನಾಟಕ ಸರ್ಕಾರವು 1973 ರಿಂದ ಕೆಎಸ್ಸಾರ್ಟಿಸಿ ಹೆಸರನ್ನು ಬಳಸುತ್ತಿತ್ತು. ನಾವು ಮೊದಲು ಬಳಸಿರುವುದರಿಂದ ನಮಗೆ ಕೆಎಸ್‌ಆರ್ಟಿಸಿ ಕೊಡಬೇಕೆಂದು ಕೇರಳ ರಾಜ್ಯವು ವಾದಿಸಿದ್ದು, ಸುದೀರ್ಘ 27 ವರ್ಷಗಳ ಕಾನೂನು ಹೋರಾಟದಲ್ಲಿ ಕೊನೆಗೂ ಕೆಎಸ್ಸಾರ್ಟಿಸಿ ಹೆಸರು ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಕೇರಳ ಸರ್ಕಾರಕ್ಕೆ ದೊರೆತಿದೆ. ಈ ಮೂಲಕ ಕರ್ನಾಟಕ ಸರಕಾರಕ್ಕೆ ಹಿನ್ನಡೆಯಾಗಿದೆ.