(ನ್ಯೂಸ್ ಕಡಬ) newskadaba.com ಕಡಬ, ಮೇ.28. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ನೀತಿ ರಕ್ಷಣಾ ತಂಡವು ಕೋವಿಡ್ ಸಂಕಷ್ಟ ಹಾಗೂ ಮಳೆಗಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಜನತೆಗೆ ನೆರವು ನೀಡಲು ಮುಂದಾಗಿದೆ ಎಂದು ಕಡಬ ತಾಲೂಕು ನೀತಿ ರಕ್ಷಣಾ ತಂಡದ ಅಧ್ಯಕ್ಷ ರಂಜಿತ್ ಕಡಬ ತಿಳಿಸಿದ್ದಾರೆ.
ಕೋವಿಡ್ ವಾರಿಯರ್ಸ್ ಆಗಿ ಜನರಿಗೆ ಸಹಕಾರ ನೀಡಲು ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನೆರವಾಗಲು ನೀತಿ ರಕ್ಷಣಾ ತಂಡವನ್ನು ರಚಿಸಿದೆ. ಕೋವಿಡ್ ತಂಡದಲ್ಲಿ ಸುನೀಶ್ ಟಿ.ಪಿ. ಹಾಗೂ ಅಬ್ರಹಾಂ ಟಿ.ಎಂ. ಅವರ ನಾಯಕತ್ವದಲ್ಲಿ ಜೋಸ್ ಥೋಮಸ್, ಸುದೀಶ್, ಸುರೇಶ್, ಸಂತೋಷ್ ಕೆ., ಅಭಿ ಗುಂಡ್ಯ ಕಮಿಟಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಮೇಶ್ ಕೆ.ಆರ್. ಹಾಗೂ ಜೋಸೆಫ್ ಪಿ.ಇ. ಅವರು ಈ ತಂಡದಲ್ಲಿ ಸದಸ್ಯರಾಗಿದ್ದಾರೆ ಎಂದು ರಂಜಿತ್ ತಿಳಿಸಿದ್ದಾರೆ.
ಕೋವಿಡ್ ರೋಗದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಕ್ಕೆ ಕೈಜೋಡಿಸುವುದು ಮತ್ತು ಕೊರೋನಾ ಸಂಕಷ್ಟದಲ್ಲಿರುವವರಿಗೆ ಔಷಧಿಗಳನ್ನು ಡೆಲಿವರಿ ಮಾಡಲು ನೀತಿ ರಕ್ಷಣಾ ತಂಡ ಮುಂದಾಗಿದೆ. ಔಷಧಿಯ ಹಣವನ್ನು ರೋಗಿಗಳೇ ಭರಿಸಬೇಕು. ಔಷಧಿಯನ್ನು ಡೆಲಿವರಿ ಮಾಡಲು ತಂಡವು ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು.
ಇನ್ನೂ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ರಂಜಿತ್ ಕಡಬ 9686776779 ಅಥವಾ 9740633794 ಸಂಖ್ಯೆಯನ್ನು ಸಂಪರ್ಕಿಸಬಹುದು. ಅಥವಾ ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ. ಅವರ ಮೊಬೈಲ್ ಸಂಖ್ಯೆ 9731567067ನ್ನು ಸಂಪರ್ಕಿಸಬಹುದು. ನೀತಿ ತಂಡದ ಈ ವಿನೂತನ ಕಾರ್ಯಕ್ರಮದ ಪ್ರಯೋಜನವನ್ನು ಕಡಬ ತಾಲೂಕಿನ ಜನತೆ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಹಾಗೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಡಬ ತಾಲೂಕಿನ ನೀತಿ ತಂಡದ ಅಧ್ಯಕ್ಷ ರಂಜಿತ್ ಕಡಬ ತಿಳಿಸಿದ್ದಾರೆ.