ಸುಳ್ಯ: ಮೊಮ್ಮಕ್ಕಳಿಗೆ ಮಾವಿನಕಾಯಿ ಕೊಯ್ದುಕೊಟ್ಟ ಹಿನ್ನೆಲೆ ➤ ಅತ್ತೆಯ ಮೇಲೆಯೇ ಮೆಣಸಿನಹುಡಿ ಮಿಶ್ರಿತ ಬಿಸಿನೀರು ಎರಚಿದ ಪಾಪಿ ಸೊಸೆ..

(ನ್ಯೂಸ್ ಕಡಬ) Newskadaba.com ಸುಳ್ಯ, ಮೇ‌ 27. ತನ್ನ ಮೊಮ್ಮಕ್ಕಳಿಗೆ ಮಾವಿನಕಾಯಿ ಕೊಯ್ದುಕೊಟ್ಟರು ಎಂಬ ನೆಪದಲ್ಲಿ ಕೋಪಗೊಂಡ ಸೊಸೆಯೋರ್ವಳು ತನ್ನ ಅತ್ತೆಯ ಮೇಲೆಯೇ ಮೆಣಸಿನ ಹುಡಿ ಮಿಶ್ರಿತ ಬಿಸಿನೀರನ್ನು ಎರಚಿದ ಅಮಾನವೀಯ ಘಟನೆ ಸುಳ್ಯದ ಪೈಚಾರ್ ಎಂಬಲ್ಲಿ ನಡೆದಿದೆ.


ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಎಂಬಾಕೆ ಈ ಕೃತ್ಯ ಎಸಗಿದ್ದಾರೆ. ಈಕೆ ಅತ್ತೆಯ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿನೀರು ಎರಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ. 26ರ ಬುಧವಾರದಂದು ಮಹಿಳೆಯು ತನ್ನ ಇನ್ನೋರ್ವ ಮಗ ಅಬ್ದುಲ್ ಎಂಬವರ ಮಕ್ಕಳಿಗೆ ಮಾವಿನ ಹಣ್ಣು ಕೊಯ್ದುಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಸೊಸೆ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.

Also Read  SSLC, PUC ಫಲಿತಾಂಶ ಸುಧಾರಣೆಗೆ 20 ಅಂಶಗಳ ಕಾರ್ಯಕ್ರಮ: ಸಚಿವ ಮಧು ಬಂಗಾರಪ್ಪ

error: Content is protected !!
Scroll to Top