ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವತಿಯಿಂದ ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಕರಾಳ ದಿನ ಆಚರಣೆ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಮೇ. 26. ದೇಶದಾದ್ಯಂತ ರೈತರು ತಮ್ಮ ನ್ಯಾಯಬದ್ಧವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಪ್ರತಿಭಟನೆ ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ಆದರೆ ದೇಶದ ಆಡಳಿತಾರೂಢ ಪಕ್ಷವು ರೈತರ ಬೇಡಿಕೆಯನ್ನು ಈಡೇರಿಸಲು ವಿಫಲವಾಗಿದೆ ಮಾತ್ರವಲ್ಲ ಹಲವಾರು ತಂತ್ರಗಳನ್ನು ಹೂಡಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನ ಮಾಡಿದ್ದಾರೆ. ಇಂದು ದೇಶದಾದ್ಯಂತ ರೈತರು ನಡೆಸುತ್ತಿರುವ “ಪ್ರಜಾಪ್ರಭುತ್ವದ ಕರಾಳ ದಿನ” ಪ್ರತಿಭಟನೆಯನ್ನು ಬೆಂಬಲಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 20 ಕಡೆ ಭಿತ್ತಿ ಪತ್ರ ಹಾಗೂ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

Also Read  ಪುತ್ತೂರಿನಲ್ಲಿ ನಡೆದ ಒಂಟಿ ವೃದ್ದೆಯ ಹತ್ಯೆ ಪ್ರಕರಣ ➤ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ


ತಾಲೂಕಿನಾದ್ಯಂತ ನಡೆದ ಈ ಪ್ರತಿಭಟನೆಯಲ್ಲಿ ಎಸ್. ಡಿ. ಪಿ. ಐ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ಪಾಲ್ಗೊಂಡಿದ್ದರು.

error: Content is protected !!
Scroll to Top