ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.10. ನೂಜಿಬಾಳ್ತಿಲ ಬೆಥನಿ ಪ.ಪು ಕಾಲೇಜಿನ ಜೋಸ್ ವಾಳಕುಝಿ ಸ್ಮಾರಕ ಸಭಾಭವನದಲ್ಲಿ ಪರಿಸರ ದಿನಾಚರಣೆ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿ ಮಾತನಾಡಿ, ನಮಗೆ ಪರಿಸರದ ಬಗ್ಗೆ ಕಾಳಜಿ ಕಡಿಮೆಯಾಗಿದೆ. ಆದರೆ ಸ್ವಚ್ಚ ಪರಿಸರ, ಗಾಳಿ, ನೀರು, ಪ್ರಕೃತಿ ರಮಣೀಯವಾದ ಕಾಡಿನೊಂದಿಗೆ ಉತ್ತಮ ಪರಿಸರ ಹೊಂದಿಕೊಳ್ಳಬೇಕಾದರೆ ನಾವು ನಮ್ಮ ಪರಿಸರದತ್ತ ಗಮನ ಹರಿಸಬೇಕಾಗಿದೆ . ಮುಂದಿನ ಪ್ರಜೆಗಳಾಗುವ ವಿದ್ಯಾರ್ಥಿಗಳಾದ ತಾವುಗಳು ಪ್ರತಿಯೊಬ್ಬರ ಮನೆ ಪರಿಸರದಲ್ಲಿ 10-10 ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕೆಂದರು. ಬಳಿಕ ಸೀಡ್ ಬಾಲ್ (ಬೀಜದ ಉಂಡೆ) ಬಗ್ಗೆ ಮಾಹಿತಿ ನೀಡಿ ಬೀಜದಿಂದ ಯಾವ ರೀತಿಯಲ್ಲಿ ಸುಲಭ ಉಪಾಯದಲ್ಲಿ ಗಿಡಗಳನ್ನು ತಯಾರಿಸಿ ನೆಟ್ಟು ಬೆಳೆಸುವುದರ ಮೂಲಕ ಹಸಿರು ಕ್ರಾಂತಿಯೊಂದಿಗೆ ಉತ್ಪಾದನೆ ಮಾಡಿಕೊಳ್ಳಬಹುದೆಂದು ವಿವರಿಸಿದರು.
ರೆ|ಫಾ| ಆ್ಯಂಜಲೋ ಒಐಸಿ ಅವರು ಓಸ್ ಮುಂಡ ಗಿಡಕ್ಕೆ ಮಣ್ಣು ನೀರು ಹಾಕಿ ವಿಶಿಷ್ಟ ರೀತಿಯಲ್ಲಿ ವಿಶ್ವ ದಿನಾಚರಣೆಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಇಕೋ ಕ್ಲಬ್ ಉದ್ಘಾಟನೆಗೊಂಡಿದ್ದು ಗ್ರೀನ್ ಬೆಥನಿ ಧ್ಯೇಯ ವಾಕ್ಯದೊಂದಿಗೆ ವಿದ್ಯಾಲಯದ ಪ್ರತಿ ತರಗತಿ ಎದುರು ಹೂತೋಟ ತರಕಾರಿ ತೋಟ, ರಚಿಸುವುದರೊಂದಿಗೆ ವನಮಹೋತ್ಸವ ಆಚರಿಸುವುದಲ್ಲದೆ ಪರಿಸರಕ್ಕೆ ಸಂಬಂಧಪಟ್ಟಂತೆ ವಿಶೇಷ ದಿನಗಳ ಆಚರಣೆಯನ್ನು ಆಚರಿಸುವುದಾಗಿ ನಿರ್ಧರಿಸಲಾಯಿತು. ಆಂಗ್ಲ ಮಾಧ್ಯಮ ಶಿಕ್ಷಕ ಬಿಜು ಕೆ.ಜೆ ಹಾಗೂ ವಿಜ್ಞಾನ ಶಿಕ್ಷಕ ಪ್ರದೀಪ್ ಕುಮಾರ್ ರವರ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರು ಪರಿಸರ ಗೀತೆ ಹಾಡಿದರು.
ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ|ಫಾ| ಫರ್ಡಿನಂಡ್ ಒಐಸಿ, ಪರ್ತಕರ್ತ ಖಾದರ್ ಸಾಹೇಬ್ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಥನಿ ಪ್ರೌಢಶಾಲಾ ಮುಖ್ಯಗುರು ತೋಮಸ್ ಎ.ಕೆ. ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್. ವಂದಿಸಿದರು. ಶಿಕ್ಷಕ ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group