ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮೂರು ಆಂಬ್ಯುಲೆನ್ಸ್ ಗಳ ಲೋಕಾರ್ಪಣೆ

(ನ್ಯೂಸ್ ಕಡಬ) Newskadaba.com ಸುಬ್ರಹ್ಮಣ್ಯ, ಮೇ. 26. ಇಲ್ಲಿನ ಪ್ರಸಿದ್ದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಚಿವ ಎಸ್ ಅಂಗಾರ ಭೇಟಿ ನೀಡಿ ದೇವಸ್ಥಾನದ ವತಿಯಿಂದ ಹೊಸದಾಗಿ ಖರೀದಿಸಲಾದ ಮೂರು ಅಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದರು. ಅಲ್ಲದೇ ಕಡಬ ಮತ್ತು ಸುಳ್ಯ ತಾಲೂಕಿನ ‘ಸಿ’ ಕ್ಲಾಸ್ ದೇವಸ್ಥಾನಗಳ ನೌಕರರಿಗೆ ಆಹಾರ ಕಿಟ್ ವಿತರಣಾ ಕಾರ್ಯವನ್ನು ನಡೆಸಿದರು.


ಈ ಸಂದರ್ಭ ಮಾತನಾಡಿದ ಅವರು ಇನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಾದ ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಳ್ಪ ಹಾಗೂ ಏನೆಕಲ್ಲು ಭಾಗದ ಗ್ರಾಮೀಣ ಜನರ ಅನುಕೂಲಕ್ಕಾಗಿ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಏಳು ಆಂಬುಲೆನ್ಸ್ ಗಳ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದರು.

Also Read  ಭ್ರಷ್ಟಾಚಾರ ಪ್ರಕರಣ: ಬಿಎಸ್‌ ಯಡಿಯೂರಪ್ಪ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿ ಕೋರಿದ ಸರ್ಕಾರ

 


ಅಲ್ಲದೇ ಲೋಕಾರ್ಪಣೆಗೊಂಡ ಮೂರು ಆಂಬ್ಯುಲೆನ್ಸ್ ಗಳು ಸುಳ್ಯ, ಬೆಳ್ಳಾರೆ ಹಾಗೂ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಚರಿಸಲಿದೆ ಎಂದರು. ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ತಹಶಿಲ್ದಾರ್ ಅನಿತಾಲಕ್ಷ್ಮೀ, ವ್ಯವಸ್ಥಾಪನಾ ಸಮಿತಿಯ ಪ್ರಸನ್ನ ದರ್ಬೆ, ವನಜಾ ಭಟ್, ಶೋಭಾ ಗಿರಿಧರ್, ಸ್ಥಳೀಯ ನಾಯಕರುಗಳಾದ ಗಿರಿಧರ ಸ್ಕಂದ, ರಾಜೇಶ್ ಎನ್ ಎಸ್, ಸವಿತಾ ಭಟ್, ದಿನೇಶ್ ರಾವ್, ದೇವಸ್ಥಾನದ ನೌಕರರು ಉಪಸ್ಥಿತರಿದ್ದರು.

error: Content is protected !!
Scroll to Top