ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ➤ ವೀಡಿಯೋದಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡ ಮಾಜಿ ಸಚಿವ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.24. ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಸಿಡಿಯಲ್ಲಿರುವುದು ನಾನೇ ಎಂದು ರಮೇಶ್ ಜಾರಕಿಹೊಳಿ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿರುವುದಾಗಿ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ವೀಡಿಯೋದಲ್ಲಿರುವ ಯುವತಿಗೆ ಯಾವುದೋ ಪ್ರಾಜೆಕ್ಟ್ ಗೆ ಸಂಬಂಧಿಸಿ ನನ್ನ ಪರಿಚಯವಾಗಿತ್ತು. ನಾವು ಕೆಲವು ಸಲ ಭೇಟಿಯಾಗಿದ್ದೆವು. ಆದರೆ ನಾನು ಆಕೆಯನ್ನು ಅತ್ಯಾಚಾರ ಮಾಡಿಲ್ಲ. ಬದಲಾಗಿ ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದಾಗಿದೆ. ನನಗೆ ಗೊತ್ತಿಲ್ಲದೇ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ತನಿಖಾಧಿಕಾರಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

Also Read  ಕಾರು ಅಪಘಾತ ➤ ಎಂಟು ಮಂದಿ ಮೃತ್ಯು.!

 

 

error: Content is protected !!
Scroll to Top