ಸುಳ್ಯ: ಅಕ್ರಮ ಜೂಜಾಟ ➤ ಮಾಜಿ ಜಿ.ಪಂ ಸದಸ್ಯ ಸೇರಿ 10 ಮಂದಿಯ ಬಂಧನ

(ನ್ಯೂಸ್ ಕಡಬ) Newskadaba.com ಸುಳ್ಯ, ಮೇ. 24. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಜೂಜಾಟದಲ್ಲಿ ನಿರತರಾಗಿದ್ದ ಮಾಜಿ ಜಿ.ಪಂ. ಸದಸ್ಯನ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿದ‌ ಘಟನೆ ಎಲಿಮಲೆ‌ಸಮೀಪದ ನೆಲ್ಲೂರು ಕೆಮ್ರಾಜೆಯ ಮೋಂಟಡ್ಕ ಎಂಬಲ್ಲಿ ನಡೆದಿದೆ.

ಬಂಧಿತರನ್ನು ಮಾಜಿ ಜಿಪಂ ಸದಸ್ಯ ಗಂಗಾಧರ ಕೇಪಳಕಜೆ, ಗೋಪಾಲಕೃಷ್ಣ, ಗಂಗಾಧರ, ಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್, ಮೋಹನದಾಸ್, ಅಶೋಕ, ದಯಾನಂದ ಬಂಧಿತರು. ಆರೋಪಿಗಳು ಮೇ. 23ರಂದು ಜೂಜಾಟದಲ್ಲಿ ನಿರತರಾಗಿದ್ದ ವೇಳೆ ಕರ್ತವ್ಯದಲ್ಲಿದ್ದ ಸುಳ್ಯ ಎಸ್ ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, ವಾಹನ ಸಹಿತ 10 ಜನರನ್ನ ಬಂದಿಸಿದ್ದಾರೆ. ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಕೊರೋನಾ ನಿಯಮ ಉಲ್ಲಂಘನೆ ಕಾಯ್ದೆಯಡಿ ಹಾಗೂ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಜೂಜಾಟವಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

Also Read  ಗ್ರಾಮೀಣ ಪ್ರದೇಶದ ಜನರಿಗೆ ಒಂದು ಸುವರ್ಣ ಅವಕಾಶ ➤ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನ

error: Content is protected !!
Scroll to Top