ಕೊರೋ‌ನಾಗೆ ಬಲಿಯಾದ ತಾಯಿಯ ನೆನಪುಗಳಿರುವ ಮೊಬೈಲ್ ಹುಡುಕಿಕೊಡಿ ➤ ಜಿಲ್ಲಾಡಳಿತಕ್ಕೆ ಮನಕಲುಕುವ ಪತ್ರ ಬರೆದ ಮಗಳು..!

(ನ್ಯೂಸ್ ಕಡಬ) Newskadaba.com ಮಡಿಕೇರಿ, ಮೇ‌ 23. ಕೊರೋನಾದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡ ಪುತ್ರಿಯೋರ್ವಳು ಇದೀಗ ಆಸ್ಪತ್ರೆಯಲ್ಲಿ ಕಳೆದು ಹೋಗಿರುವ ತನ್ನ ತಾಯಿಯ ನೆನಪುಗಳಿರುವ ಮೊಬೈಲ್ ಅನ್ನು ಹುಡುಕಿಕೊಡುವಂತೆ ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದಿದ್ದಾಳೆ.


ಕೊಡಗು ಜಿಲ್ಲೆಯ ಕುಶಾಲನಗರ ನಿವಾಸಿ ನವೀನ್ ಮತ್ತು ಪತ್ನಿ ಪ್ರಭಾ ಹಾಗೂ ಮಗಳು ಹೃತೀಕ್ಷಾ ಎಂಬವರಿಗೆ ಇತ್ತೀಚೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ ನವೀನ್ ಅವರ ಪತ್ನಿ ಪ್ರಭಾ ರವರು ಮೇ.16 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಳಿಕ ಆಸ್ಪತ್ರೆಯ ಸಿಬ್ಬಂದಿ ಪ್ರಭಾ ಅವರ ಮೃತ ದೇಹವನ್ನು ಮರಳಿ ಕುಟುಂಬಸ್ಥರಿಗೆ ನೀಡಿದ್ದು, ಆದರೆ ಈ ವೇಳೆ ಅವರ ಮೊಬೈಲ್ ಪೋನನ್ನು ಹಿಂದಿರುಗಿಸಿರಲಿಲ್ಲ. ತಾಯಿಯನ್ನು ಕಳೆದುಕೊಂಡು ತಂದೆಯೊಂದಿಗೆ ಹೋಮ್ ಕ್ವಾರಂಟೈನ್ ನಲ್ಲಿರುವ ಮಗಳು ಹೃತೀಕ್ಷಾ ತನ್ನ ತಾಯಿಯ ನೆನಪುಗಳೆಲ್ಲ ಕಳೆದು ಹೋದ ಮೊಬೈಲ್‌ನಲ್ಲಿದ್ದು, ಅದನ್ನು ಹುಡುಕಿಕೊಡುವಂತೆ ಪತ್ರ ಬರೆದು, ಸಾಮಾಜಿಕ ಜಾಲತಾಣದಲ್ಲಿ ತಂದೆ ಮಗಳು ಇಬ್ಬರೂ ಮನವಿ ಮಾಡಿಕೊಂಡಿದ್ದಾರೆ. ಇದೀಗ ಬಾಲಕಿಯ ಮನವಿಯ ಮೇರೆಗೆ ಜಿಲ್ಲಾಡಳಿತ ಸ್ಪಂದನೆ ನೀಡಿದ್ದು, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯಿಂದ ಮೊಬೈಲ್ ಹುಡುಕಲು ಪ್ರಯತ್ನಿಸಲಾಗುತ್ತಿದೆ ತಿಳಿದು ಬಂದಿದೆ.

Also Read  ಕಡಬ: 'ಸುಂದರ್ ಸೆಲೆಕ್ಷನ್' ಹವಾನಿಯಂತ್ರಿತ ವಸ್ತ್ರ ಮಳಿಗೆ ಶುಭಾರಂಭ

error: Content is protected !!
Scroll to Top