ಜೀವ ಪಣಕ್ಕಿಟ್ಟು ದೇಶ ಪ್ರೇಮ ತೋರಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

(ನ್ಯೂಸ್ ಕಡಬ) Newskadaba.com ಸಿರುಗುಪ್ಪ, ಮೇ. 23. ತಾಲೂಕಿನಲ್ಲಿ ಕೊರೋನಾ ಸೋಂಕಿತರ ಮೃತದೇಹ ಮತ್ತು ಅನಾಥ ಮೃತದೇಹಗಳ ಗೌರವದ ಅಂತ್ಯಕ್ರಿಯೆ ಮಾಡುವ ಕಾರ್ಯವನ್ನು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಾರ್ಯಕರ್ತರು ನಡೆಸುತ್ತಿದ್ದಾರೆ.

ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಲು ಪ್ರತೀಯೊಬ್ಬ ಕುಟುಂಬದ ಸದಸ್ಯರು ಇಚ್ಚೆಪಡುತ್ತಾರೆ, ಆದರೆ ಕೊರೋನಾ ಸೋಂಕು ಹರಡುತ್ತದೆ ಎನ್ನುವ ಭಯದಿಂದ ಸರ್ಕಾರವು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಲು ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಒಪ್ಪಿಸದೇ ತಾವೇ ಬೇಕಾಬಿಟ್ಟಿಯಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಕಳೆದ ವರ್ಷ ಕೊರೋನಾದಿಂದ ಮೃತಪಟ್ಟವರನ್ನು ಜೆಸಿಬಿಯಿಂದ ಶವವನ್ನು ತಂದು ಗುಂಡಿಗಳಿಗೆ ಎಳೆದು ತಂದು ಬಿಸಾಕುವ ಮೂಲಕ ಅತ್ಯಂತ ನಿರ್ಲಕ್ಷ್ಯವಾಗಿ ಅಂತ್ಯಕ್ರಿಯೆ ಮಾಡಲಾಗುತಿತ್ತು. ಇದರಿಂದಾಗಿ ಮೃತರ ಕುಟುಂಬದವರು ತಮ್ಮವರ ಅಂತ್ಯಸಂಸ್ಕಾರ ಗೌರವಯುತವಾಗಿ ನಡೆಯುತ್ತಿಲ್ಲ ಎನ್ನುವ ಸಂಕಟ ಅನುಭವಿಸುತ್ತಿದ್ದರು. ಕಳೆದ ವರ್ಷದಿಂದ ತಾಲೂಕಿನಲ್ಲಿ ಕೊರೋನಾ ಸೋಂಕಿತರಿಗೆ ಮರ್ಯಾದೆಯ ಅಂತ್ಯ ಸಂಸ್ಕಾರವನ್ನು ತಂಡದ ಯುವಕರು ಮಾಡಲು ಮುಂದಾಗಿದ್ದು, ಇಲ್ಲಿಯವರೆಗೆ 124ಕ್ಕೂ ಹೆಚ್ಚು ಅಂತ್ಯಸಂಸ್ಕಾರವನ್ನು ಅವರವರ ಧರ್ಮದ ವಿಧಿವಿಧಾನಗಳೊಂದಿಗೆ ಗೌರವಯುತವಾಗಿ ನಡೆಸಿದ್ದಾರೆ.

Also Read  ಫೋಟೋಗೀಳಿಗೆ ಜಲಪಾತಕ್ಕೆ ಬಿದ್ದು ಪ್ರಾಣತೆತ್ತ ಯುವಕ

ಈ ತಂಡದ ಸದಸ್ಯರು ಮಾಡುತ್ತಿರುವ ಕೆಲಸವನ್ನು ನೋಡಿದರೆ ಭಯವು ಆವರಿಸುತ್ತದೆ. ಮನಸ್ಸು ಭಾರವಾಗುತ್ತದೆ. ಕೊರೊನಾದಿಂದ ಮೃತಪಟ್ಟರೆ ಮನೆಯವರೇ ಹತ್ತಿರ ಬಾರದ ಪರಿಸ್ಥಿತಿಯನ್ನು ಅಪರಿಚಿತ ಶವಕ್ಕೆ ಹೆಗಲು ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಪಿಪಿಇ ಕಿಟ್ ಧರಿಸಿ ಸೊಂಕಿತರ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೊನಾ ಸೊಂಕಿತರ ಅಂತ್ಯಸಂಸ್ಕಾರವನ್ನು ಈ ತಂಡದ ಸದಸ್ಯರು ಆರೋಗ್ಯ ಇಲಾಖೆಯ ಸಮುಖದಲ್ಲಿ ವೈಜ್ಞಾನಿಕವಾಗಿ ಮಾಡುವ ಮೂಲಕ ಮಾನವೀಯತೆ ಇನ್ನೂ ಇದೆ ಎನ್ನುವುದನ್ನು ತೋರಿಸಿದ್ದಾರೆ.

ಈ ತಂಡದ ಮುಖ್ಯಸ್ಥರಾದ ಅಬ್ದುಲ್ ಸಮದ್ ರವರು ಹೇಳುವ ಪ್ರಕಾರ ಈ ಭೂಮಿಯ ಮೇಲೆ ಕಷ್ಟದಲ್ಲಿರುವ ಜನಗಳಿಗೆ ಸಹಾಯ ಮಾಡಿದರೆ ಆಕಾಶದ ಆಚೆಯಲ್ಲಿರುವವನು ನಿಮಗೆ ಸಹಾಯ ಮಾಡುತ್ತಾನೆ. ಈ ಮಹಾಮಾರಿ ಕೊರೋನಾದಿಂದ ಮೃತಪಟ್ಟವರಿಗೆ ನಮ್ಮ ಕುಟುಂಬದ ಸದಸ್ಯರು ಎಂದು ಭಾವಿಸಿ ಮಾನವೀಯತೆಯಿಂದ ಗೌರವ ಕೊಟ್ಟು ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ನಮ್ಮನ್ನು ಅರ್ಹರೆಂದು ತಿಳಿದು ನಮ್ಮ ಸಂಘಟನೆಗೆ ಸಂಪರ್ಕಿಸಿ ಈ ಪುಣ್ಯ ಕಾರ್ಯವನ್ನು ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ನಮ್ಮ ಸಂಘಟನೆ ವತಿಯಿಂದ ಧನ್ಯವಾದಗಳು ಈ ಕಾರ್ಯ ನಾವು ಜಾತಿ ಮತ ಭೇದವಿಲ್ಲದೇ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ನಮ್ಮ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಮಾನವೀಯತೆ ಮೆರೆಯವ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ತಿಳಿಸುತ್ತಾ ತಾಲೂಕು ಆಡಳಿತ ಮತ್ತು ಎಲ್ಲಾ ಇಲಾಖೆಗಳು (ಆರೋಗ್ಯ ಇಲಾಖೆ, ನಗರ ಸಭೆ ಮತ್ತು ಪೊಲೀಸ್ ಇಲಾಖೆ) ಕೋವಿಡ್-19 ನಿಯಂತ್ರಣಕ್ಕೆ ಯಶಸ್ವಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಜನರ ಹಿತಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿದೆ.

Also Read  ಸುರತ್ಕಲ್: ಕೆರೆಯಲ್ಲಿ ಮುಳುಗಿ ಯುವಕ ಸಾವು

error: Content is protected !!
Scroll to Top