ಅಂತರ್ ರಾಜ್ಯ ಮಟ್ಟದ ವಚನ ರಚನಾ ಸ್ಪರ್ಧೆ ➤ ಕಡಬದ ಸಮ್ಯಕ್ ಜೈನ್ ಪ್ರಥಮ

(ನ್ಯೂಸ್ ಕಡಬ) Newskadaba.com ಕಡಬ, ಮೇ. 16. ಜಗದ್ಗುರು ಬಸವೇಶ್ವರರ ಜನ್ಮದಿನದ ಅಂಗವಾಗಿ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಜಿಲ್ಲಾ ಘಟಕ ಹಾವೇರಿ ವತಿಯಿಂದ ‘ಯುವ ಪೀಳಿಗೆಯೂ ವಚನ ಸಾಹಿತ್ಯದಲ್ಲಿ ತೊಡಗಬೇಕು’ ಎಂಬ ಉದ್ದೇಶದಿಂದ ಅಂತರ್ ರಾಜ್ಯ ಮಟ್ಟದ ವಚನ ರಚನಾ ಸ್ಪರ್ಧೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು .

 


ಇದರಲ್ಲಿ ಕಡಬ ತಾಲೂಕು ನೂಜಿಬಾಳ್ತಿಲ, ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಹಾಗು ಮಂಜುಳಾರವರ ಸುಪುತ್ರ ಯುವ ಪ್ರತಿಭೆ ಸಮ್ಯಕ್ತ್ ಜೈನ್ ರವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಯುವ ಸಾಹಿತಿ, ವಾಗ್ಮಿ, ಅಭಿನಯಕಾರ, ನಿರೂಪಕ ಹಾಗೂ ನಾಟಕ ರಚನೆಗಾರರಾಗಿ ಗುರುತಿಸಿಕೊಂಡಿದ್ದು, ಈಗಾಗಲೇ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿರುವ ಇವರು ಪ್ರಸ್ತುತ ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ.

Also Read  ಕಡಬ: ಮುಸ್ಲಿಂ ಧರ್ಮದ ಅವಹೇಳನ ಪ್ರಕರಣ ► ಆರೋಪಿಯ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು

error: Content is protected !!
Scroll to Top