ಕಡಬ: ತಮ್ಮನಿಂದ ಅಣ್ಣನಿಗೆ ಚೂರಿ ಇರಿತ



(ನ್ಯೂಸ್ ಕಡಬ) newskadaba.com ಕಡಬ, ಮೇ.14. ಸಹೋದರರ ನಡುವೆ ಜಗಳ ನಡೆದು ಅಣ್ಣನಿಗೆ ತಮ್ಮ ಕತ್ತಿಯಿಂದ ಕಡಿದುಕೊಂಡ ಘಟನೆ ತಾಲೂಕಿನ ಮೂಜೂರು ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.







ಗಾಯಗೊಂಡ ವ್ಯಕ್ತಿಯನ್ನು ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ಸಮೀಪದ ಮುಂಡಡ್ಕ ನಿವಾಸಿ ಧ್ರುವ ಕುಮಾರ್(35) ಎಂದು ಗುರುತಿಸಲಾಗಿದೆ. ಸಹೋದರರ ನಡುವೆ ಇಂದು ಸಂಜೆ ಜಗಳವುಂಟಾಗಿ ತಮ್ಮ ಪ್ರೀತಮ್ ಎಂಬಾತ ಅಣ್ಣನಿಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದುಬಂದಿದೆ. ಗಂಭೀರ ಗಾಯಗೊಂಡ ಅಣ್ಣನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ.






 

 

error: Content is protected !!
Scroll to Top