ಕಡಬ: ತಮ್ಮನಿಂದ ಅಣ್ಣನಿಗೆ ಚೂರಿ ಇರಿತ

(ನ್ಯೂಸ್ ಕಡಬ) newskadaba.com ಕಡಬ, ಮೇ.14. ಸಹೋದರರ ನಡುವೆ ಜಗಳ ನಡೆದು ಅಣ್ಣನಿಗೆ ತಮ್ಮ ಕತ್ತಿಯಿಂದ ಕಡಿದುಕೊಂಡ ಘಟನೆ ತಾಲೂಕಿನ ಮೂಜೂರು ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.

ಗಾಯಗೊಂಡ ವ್ಯಕ್ತಿಯನ್ನು ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ಸಮೀಪದ ಮುಂಡಡ್ಕ ನಿವಾಸಿ ಧ್ರುವ ಕುಮಾರ್(35) ಎಂದು ಗುರುತಿಸಲಾಗಿದೆ. ಸಹೋದರರ ನಡುವೆ ಇಂದು ಸಂಜೆ ಜಗಳವುಂಟಾಗಿ ತಮ್ಮ ಪ್ರೀತಮ್ ಎಂಬಾತ ಅಣ್ಣನಿಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದುಬಂದಿದೆ. ಗಂಭೀರ ಗಾಯಗೊಂಡ ಅಣ್ಣನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ.

Also Read  ಕಡಬ: ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ ಬಳಕೆ ಮಾಡಿಲ್ಲ | ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ ➤ ಕಡಬ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಮೀರಾ ಸಾಹೇಬ್ ಆರೋಪ

 

 

error: Content is protected !!
Scroll to Top