ಮರ್ಧಾಳ: ಹಸಿವಿನಿಂದ ಕಂಗೆಟ್ಟಿದ್ದ ಮೂಕ ವ್ಯಕ್ತಿಗೆ ಪೊಲೀಸರಿಂದ ಉಪಚಾರ ➤ ಕಡಬ ಪೊಲೀಸರು ಹಾಗೂ ಗ್ರಾ.ಪಂ. ಅಧ್ಯಕ್ಷರ ಕಾರ್ಯಕ್ಕೆ ಮೆಚ್ಚುಗೆ

(ನ್ಯೂಸ್ ಕಡಬ) newskadaba.com ಕಡಬ, ಮೇ.14. ಹಸಿವಿನಿಂದ ಬಳಲಿದ್ದ ಅಪರಿಚಿತ ಮೂಕ ವ್ಯಕ್ತಿಯೋರ್ವರಿಗೆ‌ ಪೊಲೀಸರು ಹಾಗೂ ಪಂಚಾಯತ್ ಅಧ್ಯಕ್ಷರು ಆಹಾರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸುಬ್ರಹ್ಮಣ್ಯ ದೇವಸ್ಥಾನದ ಕಡೆಗೆ ಅಪರಿಚಿತ ವ್ಯಕ್ತಿಯೋರ್ವರು ನಡೆದುಕೊಂಡು ತೆರಳುತ್ತಿರುವುದನ್ನು ಗಮನಿಸಿದ ಕಡಬ ಠಾಣಾ ಪೊಲೀಸ್ ಚಂದನ್ ಕುಮಾರ್ ಹಾಗೂ ಹೋಮ್ ಗಾರ್ಡ್ ಪವಿತ್ ಸ್ಥಳೀಯ ನಿವಾಸಿ ಇಸ್ಮಾಯಿಲ್ ಎಂಬವರ ಮನೆಯಿಂದ ಆಹಾರ ತರಿಸಿ ನೀಡಿದ್ದಾರೆ. ಈ ವೇಳೆ ಗಸ್ತು ವಾಹನ ಹೊಯ್ಸಳದಲ್ಲಿದ್ದ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ವಿಜಯ ಹಾಗೂ ಮರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕೋಡಂದೂರು ಸ್ಥಳಕ್ಕಾಗಮಿಸಿ ಅಪರಿಚಿತ ವ್ಯಕ್ತಿಯನ್ನು ಉಪಚರಿಸಿ ಪಂಚಾಯತ್ ಆವರಣದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಾರೆ. ರಾತ್ರಿಯ ಊಟದ ವ್ಯವಸ್ಥೆಯನ್ನು ವಿನಾಯಕ ಸ್ಟುಡಿಯೋ ಮಾಲಕ ಬಾಲಕೃಷ್ಣರವರ ಮನೆಯಲ್ಲಿ ಕಲ್ಪಿಸಲಾಗಿದೆ.

Also Read  ಬೆಳ್ತಂಗಡಿ: ಒಂಟಿ ವೃದ್ಧೆಯನ್ನು ಕೊಲೆಮಾಡಿ ನಗ-ನಗದು ದರೋಡೆ ಪ್ರಕರಣ ➤ ಬಂಧಿತ ಆರೋಪಿ ಮೃತ್ಯು

 

 

 

error: Content is protected !!
Scroll to Top