(ನ್ಯೂಸ್ ಕಡಬ) Newskadaba.com ಅರಂತೋಡು, ಮೇ. 12. ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ರಂಜಾನ್ ತಿಂಗಳಲ್ಲಿ ಪ್ರತಿವರ್ಷ ಸೌಹಾರ್ದ ಇಫ್ತಾರ್ ಆಚರಣೆಗಳನ್ನು ಮಾಡುತ್ತಾ ಬಂದಿದ್ದು, ಕಳೆದ ವರ್ಷದಿಂದ ಕೊರೋನಾ ರೋಗ ದೇಶದದ್ಯಾಂತ ಹರಡಿದ್ದು ಈ ಬಾರಿ 2ನೇ ಕೊರೋನಾ ಅಲೆಯಿಂದ ರಾಜ್ಯ ಸರ್ಕಾರ ಹೊರಡಿಸಿರುವ ಲೌಕ್ ಡೌನ್ ನಿಂದ ಪ್ರತಿಷ್ಠಾನದ ವತಿಯಿಂದ ಸರಳ ಕಾರ್ಯಕ್ರಮದಲ್ಲಿ ಇಫ್ತಾರ್ ಕಿಟ್ ತಯಾರಿಸಿ 74 ಮನೆಗಳಿಗೆ ವಿತರಿಸಲಾಯಿತು.
ಇದರ ಸಭಾಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ವಹಿಸಿದರು. ಕೊರೋನಾ ನಿರ್ಮೂಲನೆಗಾಗಿ ವಿಶೇಷ ಪ್ರಾರ್ಥನೆಯನ್ನು ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ನಿರ್ವಹಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಜಾವೇದ್ ತೆಕ್ಕಿಲ್, ಲತೀಫ್ ಮೊಟ್ಟಂಗಾರ್ ತೆಕ್ಕಿಲ್ ಇದ್ದರು. ಇಫ್ತಾರ್ ಕಿಟ್ ತಯಾರಿಸಿ ವಿತರಿಸಲು ತಾಜ್ ಟರ್ಲಿ, ಜುನೈದ್, ಹಮೀದ್ ಕಲ್ಲುಗುಂಡಿ, ಸಹಲ್, ಸಫ್ವಾನ್ ಸಹಕರಿಸಿದರು.