ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿಗೆ ನಾಲ್ಕನೆಯ ಜೀವ ಬಲಿ ➤ ಮರ್ಧಾಳದ 67 ವರ್ಷದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಕೊರೋನಾ ಎರಡನೇ ಅಲೆಗೆ ಕಡಬ ತಾಲೂಕಿನಲ್ಲಿ ಸೋಮವಾರ ರಾತ್ರಿ ನಾಲ್ಕನೇ ಜೀವ ಬಲಿಯಾಗಿದೆ.

ಕಡಬ ತಾಲೂಕಿನ ಮರ್ಧಾಳ ಸಮೀಪದ 102 ನೆಕ್ಕಿಲಾಡಿ ಗ್ರಾಮದ ಕುಂಜತ್ತೋಡಿ ನಿವಾಸಿ 67 ವರ್ಷದ ವ್ಯಕ್ತಿಯೋರ್ವರು ಸೋಮವಾರದಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕಡಬದ ಮಿಲ್ ಒಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ‌.

ಕೊರೋನಾ ಎರಡನೇ ಅಲೆಗೆ ಯುವಜನರೇ ಟಾರ್ಗೆಟ್ ಆಗಿದ್ದು, ಕಳೆದ ವಾರವಷ್ಟೇ ಕಡಬ ತಾಲೂಕಿನ ಕಾಣಿಯೂರಿನ ನಿವಾಸಿ 32 ವರ್ಷದ ಯುವಕನೋರ್ವ ಬಲಿಯಾಗಿದ್ದರು. ಶುಕ್ರವಾರವಷ್ಟೇ ರಾಮಕುಂಜ ಗ್ರಾಮದ ಪೆರ್ಜಿ ನಿವಾಸಿ 45 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟಿದ್ದರು. ಶನಿವಾರದಂದು ಹಳೆನೇರಂಕಿಯ 32 ವರ್ಷದ ಯುವ ಇಂಜಿನಿಯರ್ ಮೃತಪಟ್ಟಿದ್ದರು.

Also Read  The Best Way to ACTIVATE Windows Q0 using NOTEPAD

 

 

 

error: Content is protected !!
Scroll to Top