ಮಕ್ಕಾ ಮಸೀದಿ ಅವಹೇಳನ ಪ್ರಕರಣ ► ಆರೋಪಿ ಕಡಬ ಠಾಣೆಗೆ ಶರಣಾಗತಿ

(ನ್ಯೂಸ್ ಕಡಬ) newskadaba.com ಕಡಬ, ಅ.24. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ಪ್ರಕರಣದ ಆರೋಪಿ ಕಡಬದ ಪ್ರದೀಪ್ ಕಡಬ ಠಾಣೆಗೆ ಶರಣಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಪ್ರದೀಪ್ ಕಾಬಾದ ಫೊಟೋವನ್ನು ತಿರುಚಿ ತನ್ನ ವಾಟ್ಸಪ್ ಪ್ರೊಫೈಲ್ ಫೊಟೊವನ್ನಾಗಿ ಉಪಯೋಗಿಸಿ ಮಕ್ಕಾವನ್ನು ಅವಮಾನಿಸುವ ಕೃತ್ಯವನ್ನು ಮಾಡಿದ್ದಲ್ಲದೆ ಮುಸ್ಲಿಮರ ಭಾವನೆಯನ್ನು ಕೆರಳಿಸುವಂತಹ ಹೀನಕೃತ್ಯವನ್ನು ಎಸಗಲಾಗಿದೆ. ಈತನನ್ನು ಬಂಧಿಸಬೇಕೆಂದು ಬಂಧಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮೌನ ಪ್ರತಿಭಟನೆ ನಡೆಸಲಾಗಿತ್ತು.

error: Content is protected !!
Scroll to Top