ಕಡಬ: ಅಧಿಕಾರಿ, ಜನಪ್ರತಿನಿಧಿಗಳ ಕೋವಿಡ್-19 ಮುಂಜಾಗ್ರತಾ ಸಭೆ ➤ ಹೊರ ಜಿಲ್ಲೆಯಿಂದ ಬಂದವರನ್ನು ಗುರುತಿಸಿ ಕ್ವಾರಂಟೈನ್ ಮಾಡಿ: ಸಚಿವ ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಹೊರ ರಾಜ್ಯ ಮತ್ತು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ಬಂದವರನ್ನು ಗುರುತಿಸಿ ಅಂತಹವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿ, ಇದಕ್ಕೆ ಸ್ಪಂದಿಸದೆ, ಉಡಾಫೆಯಿಂದ ವರ್ತಿಸಿದರೆ ಅಂತಹವರ ವಿರುದ್ಧ ಯಾವುದೇ ವಿನಾಯಿತಿ ತೋರದೆ ಕಾನೂನು ಕ್ರಮ ಜರಗಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.


ಸೋಮವಾರದಂದು ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿ, ಜನಪ್ರತಿನಿಧಿಗಳ ಕೋವಿಡ್-19 ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತೀ ಗ್ರಾಮದಲ್ಲಿ ಬಹಳಷ್ಟು ಮಂದಿ ಬೆಂಗಳೂರಿನಿಂದ ಬಂದವರಿದ್ದಾರೆ. ಅಂತಹವರು ಹೊರಗಡೆ ಹೋಗದೆ, ತಾವಾಗಿಯೇ ಮನೆಯಲ್ಲಿ ಕ್ವಾರಂಟೈನ್ ಆಗಬೇಕು, ಆಗದೇ ಅತ್ತಿತ್ತ ತಿರುಗಾಡುತ್ತಿದ್ದರೆ ಅಂತಹವರ ಮನೆ ಸಮೀಪದವರು ಪಂಚಾಯಿತಿಗೆ ಮಾಹಿತಿ ನೀಡಿ, ಪಂಚಾಯಿತಿಯವರು ಅಂತಹವರ ಮನೆಗೆ ಹೋಗಿ ಕ್ವಾರಂಟೈನ್ ಆಗಲು ಸೂಚನೆ ನೀಡಿ, ಅದನ್ನು ಪಾಲಿಸದೇ ಇದ್ದಲ್ಲಿ ಅವರನ್ನು ನೇರವಾಗಿ ಕಡಬ ಅಥವಾ ಪುತ್ತೂರಿನ ಕೇಂದ್ರಗಳಲ್ಲಿ ಅಥವಾ ಸ್ಥಳೀಯವಾಗಿ ಶಾಲೆಗಳನ್ನೇ ಕೇಂದ್ರಗಳನ್ನಾಗಿ ಮಾಡಿ ಕ್ವಾರಂಟೈನ್ ಆಗುವಂತೆ ವ್ಯವಸ್ಥೆ ಮಾಡಬೇಕು ಎಂದರು.

Also Read  ರೆಂಜಿಲಾಡಿ: ಭಾರೀ ಮಳೆಗೆ ಮನೆ ಜಲಾವೃತ ➤ ಏಳು ಮಂದಿಯ ರಕ್ಷಣೆ- ಸ್ಥಳಾಂತರ

ಕಳೆದ ಬಾರಿ ಕೋವಿಡ್-19 ಅಲೆ ಆರಂಭ ಆಗುತ್ತಿದ್ದಂತೆ ಜನರಲ್ಲಿ ಅದರ ಬಗ್ಗೆ ಭಯದ ಜೊತೆಗೆ ಜಾಗೃತಿ ಇತ್ತು. ಆದರೆ ಈ ಬಾರಿ ತೀರಾ ನಿರ್ಲಕ್ಷ್ಯತೆ ವಹಿಸುತ್ತಿರುವುದು ಕಂಡು ಬರುತ್ತಿದೆ, ಇದು ತೀರಾ ಅಪಾಯದ ಬೆಳವಣಿಗೆಯಾಗಿದ್ದು, ನಾವು ಜಾಗೃತರಾಗದಿದ್ದಲ್ಲಿ ಇದರ ದುಷ್ಪರಿಣಾಮವನ್ನು ಪ್ರತಿಯೋರ್ವರೂ ಅನುಭವಿಸಬೇಕಾಗುತ್ತದೆ, ಈ
ನಿಟ್ಟಿನಲ್ಲಿ ನಿರ್ಲಕ್ಷ ಸಲ್ಲದು ಎಂದರು.

ತಹಸೀಲ್ದಾರ್ ಅನಂತ ಶಂಕರ, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ‍್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲ್ಲೂಕು ಪ್ರಭಾರ ವೈದ್ಯಾಧಿಕಾರಿ ಡಾ| ಅಶೋಕ್ ರೈ ಮಾತನಾಡಿ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ನೀಡಿರುವ ಜವಾಬ್ದಾರಿಗಳ ಬಗ್ಗೆ ತಿಳಿಸಿ, ಅಗತ್ಯ ಬಿದ್ದಲ್ಲಿ
ಮೇಲಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.

ಕೊಯಿಲ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಆರೋಗ್ಯ ಸಹಾಯಕಿ ಲೀಲಾವತಿ, ಆಲಂಕಾರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಂತಿ ಗೌಡ, ಕೊಯಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ನಜೀರ್ ಪೂರಿಂಗ, ಸೀತಾರಾಮ, ಚಂದ್ರಶೇಖರ, ಯತೀಶ್, ಚಿದಾನಂದ, ಸಜ್ಜಾದ್, ಪುಷ್ಪ, ಭಾರತಿ, ಶಶಿಕಲಾ, ಜೊಹರಾ, ಸಫೀಯ, ಆಲಂಕಾರು ವ್ಯವಸಾಯ ಸಹಕಾರಿ ಸಂಘದ ಕೊಯಿಲ ಶಾಖಾ ಮೆನೇಜರ್ ಆನಂದ ಗೌಡ, ಶಿಕ್ಷಕರಾದ ಕುಶಾಲಪ್ಪ ಗೌಡ, ಪೂರ್ಣಿಮಾ, ಆಶಾ ಕರ‍್ಯಕರ್ತರು, ಅಂಗನವಾಡಿ ಕರ‍್ಯಕರ್ತರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಪಿಡಿಒ ಎ.ಕೆ. ನಮಿತಾ ಸ್ವಾಗತಿಸಿ, ಕರ‍್ಯದರ್ಶಿ ಪಮ್ಮು ವಂದಿಸಿದರು.

Also Read  ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಟಿದ ಕೂಟೊ ಲೇಸ್ - ಸನ್ಮಾನ

 

 

error: Content is protected !!
Scroll to Top