(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.10. ರಾಜ್ಯದಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ಕಠಿಣ ಲಾಕ್‍ಡೌನ್ ಜಾರಿಯಾಗಲಿದ್ದು, ಫುಲ್ ಟೈಟ್ ಲಾಕ್‍ಡೌನ್ ಗೆ ಕೌಂಟ್ ಡೌನ್ ಆರಂಭಗೊಂಡಿದೆ.
ಇಂದಿನ ಲಾಕ್‍ಡೌನ್ ಈ ಹಿಂದಿಗಿಂತ ಕಠಿಣವಾಗಿ ಇರಲಿದ್ದು, ವಾಹನ ಓಡಾಟಕ್ಕೂ ಕಡಿವಾಣ ಬಿದ್ದಿದೆ. ಸರಕಾರವು ಖಾಕಿ ಕೈಗೆ ಅಸ್ತ್ರ ಕೊಟ್ಟು ಖಡಕ್ ರೂಲ್ಸ್ ಮಾಡಿದ್ದು, ಕುಂಟು ನೆಪ ಹೇಳಿಕೊಂಡು ಅನಗತ್ಯ ಮನೆಯಿಂದ ಹೊರ ಬಂದರೆ ಅರೆಸ್ಟ್ ಮಾಡ್ತೇವೆ ಅಂತ ಪೊಲೀಸರು ಎಚ್ಚರಿಸಿದ್ದಾರೆ. ಲಾಕ್‍ಡೌನ್ ನಲ್ಲಿ ಬೇಕಾಬಿಟ್ಟಿ ಹೊರಬಂದ್ರೆ ಪೊಲೀಸರ ಕೈಗೆ ಲಾಕ್ ಆಗೋದಂತೂ ಗ್ಯಾರಂಟಿಯಾಗಿದ್ದು, ಅಗತ್ಯದ ಹೆಸರಿನಲ್ಲಿ ವಾಹನದಲ್ಲಿ ಬಂದರೆ ವಾಹನ ಸೀಝ್ ಮಾಡೋ ಎಚ್ಚರಿಕೆಯನ್ನು ನೀಡಲಾಗಿದೆ. ಈ ಮೂಲಕ ಮನೆಯಿಂದ ಬಾಹರ್ ಬಂದರೆ ಅಂದರ್ ಆಗೋದು ಫಿಕ್ಸ್ ಎಂಬಂತಾಗಿದೆ.