ಬಿಳಿನೆಲೆ, ಕುಲ್ಕುಂದ ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ► ಕಾಣಿಕೆ ಹುಂಡಿ, ಮೊಬೈಲ್ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಕಡಬ, ಅ.24. ಠಾಣಾ ವ್ಯಾಪ್ತಿಯ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಒಳ ನುಗ್ಗಿರುವ ಕಳ್ಳರು ಮುಖ್ಯದ್ವಾರದ ಬೀಗವನ್ನು ಮುರಿದು ಒಳ‌ಪ್ರವೇಶಿಸಿ ನಮಸ್ಕಾರ ಮಂಟಪದ ಬದಿಯಲ್ಲಿದ್ದ 2 ಕಾಣಿಕೆ ಡಬ್ಬಿ ಹಾಗೂ ಗಣಪತಿ ಗುಡಿಯ ಕಾಣಿಕೆ ಡಬ್ಬಿ ಸೇರಿದಂತೆ ಒಟ್ಟು ಮೂರು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 12000 ಹಾಗೂ ಒಂದು ಮೈಕ್ರೋಮ್ಯಾಕ್ಸ್ ಮೊಬೈಲನ್ನು ಕದ್ದೊಯ್ದಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಸೋಮವಾರ ಸಂಜೆ ಅರ್ಚಕರು ಎಂದಿನಂತೆ ಬೀಗ ಹಾಕಿ ಹೋಗಿದ್ದು, ಮಂಗಳವಾರ ಬೆಳಿಗ್ಗೆ ಆಗಮಿಸಿದಾಗ ಕಳ್ಳತನ ಘಟನೆ ಬೆಳಕಿಗೆ ಬಂದಿದೆ‌‌. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  13ನೇ ಸಾಂಖ್ಯಿಕ ದಿನಾಚರಣೆ ಹಾಗೂ ➤ ಸಂಖ್ಯಾಶಾಸ್ತ್ರದ ಪಿತಾಮಹ ಪ್ರೊ.ಪಿ.ಸಿ.ಮಹಾಲನೋಬಿಸ್ರವರ 125ನೇ ಜನ್ಮ ದಿನಾಚರಣೆ

ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ದೇವಸ್ಥಾನಕ್ಕೂ ನುಗ್ಗಿರುವ ಕಳ್ಳರು ಕಾಣಿಕೆ ಹುಂಡಿಗಳನ್ನು ಹೊತ್ತೊಯ್ದಿದ್ದಾರೆ. ಎರಡೂ ಕೃತ್ಯಗಳನ್ನು ಒಂದೇ ತಂಡ ಮಾಡಿರಬಹುದೆಂದು ಶಂಕಿಸಲಾಗಿದೆ‌.

error: Content is protected !!
Scroll to Top