ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ➤ ಎಸ್ಡಿಪಿಐ ವತಿಯಿಂದ ದೂರು ದಾಖಲು

(ನ್ಯೂಸ್ ಕಡಬ) Newskadaba.com ಪುಂಜಾಲಕಟ್ಟೆ, ಮೇ. 09. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುಂಜಾಲಕಟ್ಟೆ ಇದರ ವತಿಯಿಂದ ಇತ್ತೀಚೆಗೆ ಶಿವಕುಮಾರ್ ಮೆಂದರ್ ಎನ್ನುವ ವ್ಯಕ್ತಿಯು ತನ್ನ ಫೇಸ್ ಬುಕ್ ಖಾತೆಯಲ್ಲಿ ಮುಸ್ಲಿಂ ಸಂಘಟನೆಗಳ ಯುವಕರು ರಾಜ್ಯದಾದ್ಯಂತ ನಡೆಸುತ್ತಿರುವ ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಗೌರವಯುತ ಅಂತ್ಯಸಂಸ್ಕಾರದ ಬಗ್ಗೆ ಅವಹೇಳನಕಾರಿ ಮತ್ತು ಆಧಾರ ರಹಿತ ಸಂದೇಶದ ರವಾನಿಸಿರುವುದರ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.


ಈ ಸಂದರ್ಭದಲ್ಲಿ ಎಸ್ಡಿಪಿಐ ಕುಕ್ಕಳ ಗ್ರಾಮ ಸಮಿತಿ ಕಾರ್ಯದರ್ಶಿ ಮಜೀದ್ ಪುಂಜಾಲಕಟ್ಟೆ ಹಾಗೂ ಹಫೀಝ್ ಮೂರ್ಜೆ ಉಪಸ್ಥಿತರಿದ್ದರು.

Also Read  ರಾಜಕಾರಣಿ ಆಗುವುದಕ್ಕಾಗಿ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ ಪೊಲೀಸ್ ಅಧಿಕಾರಿ ► ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಬಜ್ಪೆ ಸಬ್ ಇನ್ಸ್‌ಪೆಕ್ಟರ್ ಮದನ್

error: Content is protected !!
Scroll to Top