ಸುಬ್ರಹ್ಮಣ್ಯ: ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪ ➤ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.09. ಅರಣ್ಯಾಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ನಾಲ್ವರ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲಮೊಗ್ರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ ಎಂಬವರು ಮೇ 04 ರಂದು ಇಲಾಖೆಯ ವಾಹನದಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಇಲಾಖಾ ಜೀಪನ್ನು ಬೈಕೊಂದು ಹಿಂಬಾಲಿಸಿ ಬರುತ್ತಿರುವುದನ್ನು ಕಂಡು ಕೊಲ್ಲಮೊಗ್ರು ಗ್ರಾಮದ ನಿಲ್ಕೂರು ಎಂಬಲ್ಲಿ ರಸ್ತೆ ಬದಿ ಜೀಪನ್ನು ನಿಲ್ಲಿಸಿದಾಗ ಹಿಂಬಾಲಿಸಿಕೊಂಡು ಬರುತ್ತಿದ್ದ ಬೈಕ್ ಅಲ್ಲಿಂದಲೇ ಹಿಂತಿರುಗಿ ಕೊಲ್ಲಮೊಗ್ರು ಕಡೆಗೆ ತೆರಳಿದೆ ಎನ್ನಲಾಗಿದೆ. ಅನುಮಾನಗೊಂಡ ಅರಣ್ಯಾಧಿಕಾರಿಗಳು ಬೈಕನ್ನು ವಾಪಸ್ ಹಿಂಬಾಲಿಸಿದ್ದು, ಈ ವೇಳೆ ಕೊಲ್ಲಮೊಗ್ರು ಪೇಟೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕೊಪ್ಪಡ್ಕ ಹಾಗೂ ಅಪರಿಚಿತ ನಾಲ್ವರನ್ನು ಗಮನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಅಗಸಿಮನಿಯವರು ಅಪರಿಚಿತರ ಪರಿಚಯವನ್ನು ಕೇಳಿದ್ದರಿಂದ ಕೆರಳಿದ ಉದಯ ಕೊಪ್ಪಡ್ಕರವರು ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಅಪೂರ್ವರವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.

Also Read  ಅನ್ವಾರುಲ್ ಹುದಾ ಶಾದಿಮಹಲ್ ಕಟ್ಟಡಕ್ಕೆ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರಿಂದ 5 ಲಕ್ಷ ರೂ. ಅನುದಾನ ಬಿಡುಗಡೆ

 

 

 

 

error: Content is protected !!
Scroll to Top