ರಾಜ್ಯದಲ್ಲಿ ಒಂದೇ ದಿನ 47 ಸಾವಿರ ಮಂದಿಗೆ ಕೊರೋನಾ ದೃಢ | 482 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.08. ರಾಜ್ಯದಲ್ಲಿ ದಾಖಲೆಯ ಪ್ರಮುಖ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕರ್ಫ್ಯೂ ಜಾರಿ ಮಾಡಿದ್ದರೂ ಸಹ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಆರೋಗ್ಯ ಇಲಾಖೆಯ ವರದಿಯಂತೆ ರಾಜ್ಯದಲ್ಲಿ ಒಂದೇ ದಿನದಲ್ಲಿ 47563 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ 482 ಮಂದಿ ಕೊರೋನಾ ಸೋಂಕಿನಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ‌. ದಕ್ಷಿಣ ಕನ್ನಡದಲ್ಲಿ 1513 ಮಂದಿ ಸೋಂಕಿತರಾಗಿದ್ದು, 3 ಮಂದಿ ಬಲಿಯಾಗಿದ್ದಾರೆ. ಉಡುಪಿಯಲ್ಲಿ 1043 ಮಂದಿಗೆ ಪಾಸಿಟಿವ್ ಬಂದಿದ್ದು, 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾ ಎರಡನೇ ಅಲೆಯು ಭೀಕರವಾಗಿದ್ದು, ಮನೆಯಿಂದ ಹೊರಬರದೆ ಇದ್ದರೆ ಮಾತ್ರ ಸೋಂಕು ಮುಕ್ತರಾಗಿ ಇರಬಹುದಾಗಿದೆ.

Also Read  ಹೃದಯಾಘಾತದಿಂದ ಮೃತಪಟ್ಟಿದ್ದ ಪತ್ರಕರ್ತ ಕಲ್ಲುಗುಡ್ಡೆ ಖಾದರ್ ಸಾಹೇಬ್ ➤ ಸಾಹೇಬ್ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ. ಪರಿಹಾರ

 

 

 

error: Content is protected !!
Scroll to Top