ಬಿಗ್ ಬಾಸ್ ಪ್ರಿಯರಿಗೆ ಬಿಗ್ ಶಾಕ್ ➤ Big Boss – 8 ನೇ ಅವೃತ್ತಿಗೂ ತಟ್ಟಿದ ಕೊರೋನಾ ಬಿಸಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.08. ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ತನ್ನ ಎಂಟನೇ ಆವೃತ್ತಿಯನ್ನು ಅರ್ಧದಲ್ಲೇ ಕೊನೆಗೊಳಿಸುವ ತೀರ್ಮಾನಕ್ಕೆ ಬಂದಿದ್ದು, ಇದು ಬಿಗ್ ಬಾಸ್ ಪ್ರೇಕ್ಷಕರಿಗೆ ಬಿಗ್ ಶಾಕ್ ನೀಡಿದೆ.

100 ದಿನಗಳ ಈ ಕಾರ್ಯಕ್ರಮವು 70% ಪೂರ್ಣಗೊಂಡಿದ್ದು, ದೇಶದಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 8 ನೇ ಆವೃತ್ತಿಯನ್ನು ನಾಳೆಗೆ ಕೊನೆಗೊಳಿಸಲಿದೆ. ಕಿಚ್ಚ ಸುದೀಪ್ ಅವರು ಅನಾರೋಗ್ಯದ ನಿಮಿತ್ತ ಕಳೆದ ವಾರದ ಶೋ ನಡೆಸಲು ಸಾಧ್ಯವಾಗಿರಲಿಲ್ಲ. ಈ ವಾರವೂ ಸುದೀಪ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಿಲ್ಲ ಎಂಬ ಸುದ್ದಿ ಹೊರ ಬಂದ ಬೆನ್ನಲ್ಲೇ ಬಿಗ್ ಬಾಸ್ ಕೊನೆಗೊಳ್ಳುವ ಸುದ್ದಿ ಹೊರಬಿದ್ದಿದೆ.

Also Read  ಅರಂತೋಡು: ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

 

 

error: Content is protected !!
Scroll to Top