ರಾಜ್ಯದಲ್ಲಿ ಆದೇಶ ಹೊರಡಿಸಲು ಮಾತ್ರ ಸರಕಾರವಿರುವುದಲ್ಲ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು ➤ ಶೌವಾದ್ ಗೂನಡ್ಕ

(ನ್ಯೂಸ್ ಕಡಬ) Newskadaba.com ಸುಳ್ಯ,ಮೇ. 08. ರಾಜ್ಯ ಸರ್ಕಾರವು “ಅಘೋಷಿತ ಲಾಕ್ ಡೌನ್” ಬಿಗಿ ಕ್ರಮಗಳ ಮೂಲಕ ಮೇ. 24ರ ವರೆಗೆ ಕೋವಿಡ್ ಕರ್ಫ್ಯೂವನ್ನು ಮುಂದುವರೆಸಿದೆ. ಬಹುತೇಕ ಈ ಹಿಂದಿನ ನಿಯಮಗಳನ್ನೇ ಮುಂದುವರೆಸಿದ್ದು, ಇಲ್ಲಿ ಯಾವುದೇ ಬಿಗಿಕ್ರಮಗಳು ನಮಗೆ ಕಂಡುಬರುವುದಿಲ್ಲ, ರಾಜ್ಯದಲ್ಲಿ ಪ್ರಸ್ತುತ ಆದೇಶಗಳನ್ನು ಹೊರಡಿಸಲು ಮಾತ್ರ ಸರ್ಕಾರವಿದ್ದು, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಇದು ನಾಮಕಾವಸ್ತೆಯ ಸರ್ಕಾರವೆಂದು ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರದಲ್ಲೇ ಸಮನ್ವಯತೆಯಿಲ್ಲ. ಆರೋಗ್ಯ ಸಚಿವರನ್ನು ಮೂಲೆಗುಂಪು ಮಾಡಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನ ಪರಿಸ್ಥಿತಿ ಕೊರೋನಾಗಿಂತಲೂ ಭೀಕರವಾಗಿದ್ದು, ಸರ್ಕಾರಕ್ಕೆ ಎಲ್ಲವೂ ಕಾಣುತ್ತಿದ್ದರೂ ಕೂಡಾ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಮುಖ್ಯಮಂತ್ರಿಗಳು ಜನಪರವಾದ ಯೋಜನೆಗಳನ್ನು ನೀಡದೆ ಕಾರ್ಮಿಕರನ್ನು, ಬಡ ವ್ಯಾಪಾರಸ್ಥರನ್ನು, ದಿನಗೂಲಿ ನೌಕರರನ್ನು ಮನೆಯಲ್ಲಿ ಕುಳಿತುಕೊಳ್ಳಲು ಸೂಚಿಸುತ್ತಿದ್ದಾರೆ. ಅವರ ಜೀವನ ನಿರ್ವಹಣೆಗೆ ಸರ್ಕಾರ ಸಹಾಯ ಹಸ್ತವನ್ನು ನೀಡುವ ಮೂಲಕ ರಾಜ್ಯದಲ್ಲಿ ಸರ್ಕಾರ ಜೀವಂತವಿದೆ ಎಂದು ತೋರ್ಪಡಿಸಿ ಆ ನಂತರ ಬಿಗಿಕ್ರಮಗಳನ್ನು ಜಾರಿಗೊಳಿಸಿ ಎಂದು ಶೌವಾದ್ ಗೂನಡ್ಕರವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Also Read  ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ► ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ

error: Content is protected !!
Scroll to Top