ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿಗೆ ಎರಡನೇ ಬಲಿ ➤ 45 ವರ್ಷದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕೊರೋನಾ ಎರಡನೇ ಅಲೆಗೆ ಕಡಬ ತಾಲೂಕಿನಲ್ಲಿ ಎರಡನೇ ಜೀವ ಬಲಿಯಾಗಿದೆ.

ಕಡಬ ತಾಲೂಕಿನ ರಾಮಕುಂಜ ಗ್ರಾಮದ ಪೆರ್ಜಿ ನಿವಾಸಿ 45 ವರ್ಷದ ವ್ಯಕ್ತಿಯೋರ್ವರು ಶುಕ್ರವಾರದಂದು ಮೃತಪಟ್ಟಿದ್ದಾರೆ‌. ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಇವರು ಇತ್ತೀಚೆಗೆ ಊರಿಗೆ ಬಂದಿದ್ದರು ಎನ್ನಲಾಗಿದೆ. ಕೊರೋನಾ ಪಾಸಿಟಿವ್ ಬಂದಿದ್ದರಿಂದ ಮಂಗಳೂರಿನ ಕೋವಿಡ್ ಸೆಂಟರ್ ಗೆ ದಾಖಲಿಸಲಾಗಿತ್ತು. ಶುಕ್ರವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌. ಕೊರೋನಾ ಎರಡನೇ ಅಲೆಗೆ ಯುವಜನರೇ ಟಾರ್ಗೆಟ್ ಆಗಿದ್ದು, ಕಳೆದ ವಾರವಷ್ಟೇ ಕಡಬ ತಾಲೂಕಿನ ಕಾಣಿಯೂರಿನ ನಿವಾಸಿ 32 ವರ್ಷದ ಯುವಕನೋರ್ವ ಬಲಿಯಾಗಿದ್ದರು.

Also Read  Days Associated With Play 2024 Involves Playstation Store Ps Blog

 

 

 

error: Content is protected !!
Scroll to Top