ಆತೂರು: ರಂಝಾನ್ ಕಿಟ್ ವಿತರಣೆ

(ನ್ಯೂಸ್ ಕಡಬ) Newskadaba.com ಆತೂರು, ಮೇ. 07. ಆತೂರು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಇದರ ವತಿಯಿಂದ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಅಧ್ಯಾಪಕರ ವೃಂದದವರಿಗೆ ರಮಳಾನ್ ಕಿಟ್ ನೀಡಲಾಯಿತು.

ಆತೂರು ಬದ್ರಿಯಾ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರೇಂಜ್ ಮ್ಯಾನೇಜ್ ಮೆಂಟ್ ಅಧ್ಯಕ್ಷರಾದ ಬಿ.ಕೆ.ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು. ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಕೆ.ಯಚ್.ಎಸ್.ಫಾಝಿಲ್ ಹನೀಫಿ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು. ಮಜೀದ್ ದಾರಿಮಿ, ಮುನೀರ್ ಅನ್ವರಿ, ಇಬ್ರಾಹಿಂ ಕೌಸರಿ, ರಫೀಕ್ ಅರ್ಶದಿ, ಅಶ್ರಫ್ ರಹ್ಮಾನಿ, ಅಬೂಸ್ವಾಲಿಹ್ ಝೈನಿ, ಜಿ.ಮುಹಮ್ಮದ್ ರಫೀಕ್, ಹೈದರ್ ಕಲಾಯಿ, ಅಬ್ದುಲ್ ರಹ್ಮಾನ್ ಮರುವೇಲು, ಸಿದ್ದೀಕ್ ನೀರಾಜೆ, ಇಸ್ಹಾಕ್ ಕೆಮ್ಮಾರ, ಹಂಝ ಸಖಾಫಿ, ಇಸ್ಹಾಕ್ ಕೌಸರಿ, ಬದ್ರುದ್ದೀನ್ ಮುಸ್ಲಿಯಾರ್, ಅಬ್ದುಲ್ ಲತೀಫ್ ಕುಂಡಾಜೆ, ಝಕರಿಯ್ಯಾ ಮುಸ್ಲಿಯಾರ್, ಕೆ.ಎ ಸುಲೈಮಾನ್ ಎಲ್ಯಂಗ, ಅಝೀಝ್ ಹಲ್ಯಾರ, ಅಶ್ರಫ್ ಕೋರೆಪದವು, ಇಸ್ಮಾಯಿಲ್ ಆತೂರು ಬೈಲು, ಮುಹಮ್ಮದ್ ಕುಂಡಾಜೆ, ರೇಂಜ್ ನಾಯಕರ ಮೊದಲಾದವರು ಉಪಸ್ಥಿತರಿದ್ದರು. ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಕೆ.ಯಂ.ಎಸ್. ಫೈಝಿ ಕರಾಯ ಸ್ವಾಗತಿಸಿ, ವಂದಿಸಿದರು.

Also Read  ಕೊಯಿಲ: ಮಕ್ಕಳ ಗ್ರಾಮಸಭೆ ► ವಿದ್ಯಾರ್ಥಿಗಳಿಂದ ವಿವಿಧ ಬೇಡಿಕೆಗಳ ಮಂಡನೆ

error: Content is protected !!
Scroll to Top