ಕಡಬ: ಅನಗತ್ಯ ತಿರುಗಾಡುವವರಿಗೆ ಪೊಲೀಸರಿಂದ ಬಿಸಿ ➤ 7 ವಾಹನಗಳು ಸೀಝ್

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಿರುವ ಕಡಬ ಪೊಲೀಸರು ಗುರುವಾರದಂದು 7 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿರುವ ಕಡಬ ಪೊಲೀಸರು ಮಾಸ್ಕ್ ಧರಿಸದೆ ಬಂದಿದ್ದ 11 ಮಂದಿಗೆ ದಂಡ ವಿಧಿಸಿದ್ದಾರೆ. ಅಲ್ಲದೇ ತಂಡ ತಂಡವಾಗಿ ಪೊಲೀಸರು ಗಸ್ತು ತಿರುಗುತ್ತಿದ್ದು, ಸಂಜೆ ವೇಳೆಗೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ.

 

 

 

error: Content is protected !!
Scroll to Top