(ನ್ಯೂಸ್ ಕಡಬ) newskadaba.com ಸುಳ್ಯ, ಮೇ.05. ಅನಗತ್ಯ ತಿರುಗಾಡುವವರಿಗೆ ಸುಳ್ಯ ಪೊಲೀಸರು ಬಿಸಿ ಮುಟ್ಟಿಸಿದ್ದು, ನಾಳೆಯಿಂದ ಸುಳ್ಯ ಪೇಟೆಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಸುಳ್ಯ ಠಾಣಾ ಎಸ್ಐ ಸೂಚಿಸಿದ್ದಾರೆ.
ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಲು ಸರಕಾರವು ಅವಕಾಶವನ್ನು ಕಲ್ಪಿಸಿದೆಯಾದರೂ ಹೆಚ್ಚಿನವರು ಸುಳ್ಯ ಪೇಟೆಗೆ ಆಗಮಿಸುವ ಮೂಲಕ ಟ್ರಾಫಿಕ್ ಜಾಮ್ ಗೆ ಕಾರಣರಾಗುತ್ತಿದ್ದಾರೆ. ಸುಳ್ಯದ ಜ್ಯೋತಿ ಸರ್ಕಲ್, ಗಾಂಧಿನಗರ ಹಾಗೂ ವಿವೇಕಾನಂದ ಸರ್ಕಲ್ ನಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಲಾಗುವುದು. ಅಗತ್ಯ ವಾಹನಗಳನ್ನಷ್ಟೇ ವಿಚಾರಿಸಿ ಬಿಡಲಾಗುವುದು. ಹಾಗೊಂದು ವೇಳೆ ಬರಲೇ ಬೇಕೆಂದರೆ ವಾಹನವನ್ನು ನಾವು ತಡೆದಲ್ಲಿ ನಿಲ್ಲಿಸಿ ನಡೆದುಕೊಂಡೇ ಹೋಗಬೇಕು. ಸಾರ್ವಜನಿಕರು ಸಹಕರಿಸುವಂತೆ ಎಸ್ಐ ಹರೀಶ್ ಮನವಿ ಮಾಡಿಕೊಂಡಿದ್ದಾರೆ.