ಕಡಬ: ಚಿರತೆಯ ಹೆಜ್ಜೆಗುರುತು ಪತ್ತೆ ➤ ಆತಂಕದಲ್ಲಿ ಸ್ಥಳೀಯರು

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಕಳೆದೆರಡು ತಿಂಗಳ ಹಿಂದೆ ಕಡಬ ತಾಲೂಕಿನ ರೆಂಜಿಲಾಡಿ ಪರಿಸರದಲ್ಲಿ ಕಂಡು ಬಂದಿದ್ದ ಚಿರತೆಯ ಹಾವಳಿ ಇದೀಗ ಕಡಬದಲ್ಲಿ ಮತ್ತೆ ಕಂಡುಬಂದಿದೆ.

ಕಡಬದ ಮಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ಭಾನುವಾರ ತಡರಾತ್ರಿ ವೇಳೆಗೆ ಚಿರತೆಯು ಅಡ್ಡಾಡಿದೆ ಎನ್ನಲಾಗಿದ್ದು, ಇದಕ್ಕೆ ಪುರಾವೆ ಎಂಬಂತೆ ಪರಿಸರದಲ್ಲಿ ಹೆಜ್ಜೆಗುರುತುಗಳು ಕಂಡುಬಂದಿವೆ. ಅಲ್ಲದೇ ಕಳೆದ ದಿನ ಪರಿಸರದ ಆಡು ಮತ್ತು ಕೋಳಿಯ ತಲೆ ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು, ಪರಿಸರದಲ್ಲಿ ಕೆಲವು ನಾಯಿಮರಿಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಪಂಜ ವಲಯ ಉಪ ಅರಣ್ಯಾಧಿಕಾರಿ ಅಜಿತ್, ಅರಣ್ಯ ರಕ್ಷಕರಾದ ಸುಬ್ರಹ್ಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕರಾವಳಿ ಉತ್ಸವ –ವಸ್ತುಪ್ರದರ್ಶನ ಫೆ. 23ರವರೆಗೆ

 

 

 

error: Content is protected !!
Scroll to Top