ಮೊಬೈಲ್ ಟವರ್ ನಲ್ಲಿ ವಿದ್ಯುತ್ ಆಘಾತ➤ ಟವರ್ ಮೈಂಟೇನರ್ ಮೃತ್ಯು



(ನ್ಯೂಸ್ ಕಡಬ) newskadaba.com ಕಡಬ, ಮೇ.02. ವಿದ್ಯುತ್ ಅವಘಡದಿಂದಾಗಿ ಮೊಬೈಲ್ ಟವರ್ ಮೈಂಟೇನರ್ ಓರ್ವರು ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಆಲಂಕಾರಿನಲ್ಲಿ ನಡೆದಿದೆ.





ಮೃತ ವ್ಯಕ್ತಿಯನ್ನು ಉಪ್ಪಿನಂಗಡಿ ನಿವಾಸಿ ಶ್ಯಾಮ್ ಎಂದು ಗುರುತಿಸಲಾಗಿದೆ. ಮೃತರು ಆಲಂಕಾರು‌ ಸಮೀಪದ ನೆಕ್ಕರೆ ಎಂಬಲ್ಲಿರುವ ಏರ್ ಟೆಲ್ ಕಂಪೆನಿಯ ಟವರ್ ಮೈಂಟೈನರ್ ಆಗಿದ್ದು, ಭಾನುವಾರದಂದು ರಾತ್ರಿ ವೇಳೆ ವಿದ್ಯುತ್ ಅವಘಡದಿಂದಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 

 

error: Content is protected !!
Scroll to Top