ಮಂಗಳೂರು: ನಿಸರ್ಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಪೊಲೀಸ್ ದಾಳಿ ➤ 50 ಬಾಕ್ಸ್ ಮದ್ಯ ಹಾಗೂ ಆರೋಪಿ ವಶಕ್ಕೆ

(ನ್ಯೂಸ್ ಕಡಬ) Newskadaba.com ಮಂಗಳೂರು, ಮೇ. 01. ಬಾರ್ ವೊಂದಕ್ಕೆ ದಾಳಿ ನಡೆಸಿದ ಪೊಲೀಸರು 1.53 ಲಕ್ಷ ರೂ. ಮೌಲ್ಯದ 52 ಬಾಕ್ಸ್‌ ಅಕ್ರಮ ಮದ್ಯ ವಶಪಡಿಸಿ, ಓರ್ವನನ್ನು ಬಂಧಿಸಿದ ಘಟನೆ ತಲಪಾಡಿ ಚೆಕ್‌ಪಾಯಿಂಟ್ ಬಳಿ ನಡೆದಿದೆ.

ಬಂಧಿತನನ್ನು ಕ್ಯಾಷಿಯರ್ ಚರಣ್ (22)ಎಂದು ಗುರುತಿಸಲಾಗಿದೆ. ಈ ಕುರಿತು ಆತನಲ್ಲಿ ಪ್ರಶ್ನಿಸಿದಾಗ ಆತ ಮದ್ಯವನ್ನು ನಗರದ ಮತ್ತೊಂದು ವೈನ್ ಶಾಪ್‌ನಿಂದ ಖರೀದಿಸಿರುವುದಾಗಿ ತಿಳಿಸಿದ್ದಾನೆ. ಇದೀಗ ಚರಣ್‌ನನ್ನು ಬಂಧಿಸಿರುವ ಪೊಲೀಸರು, ಬಾರ್‌ ವ್ಯವಸ್ಥಾಪಕರಾದ ದಿವ್ಯಾ ರಾಜ್ ಮತ್ತು ರೋಹಿತ್‌ ಎಂಬವರ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. ದಾಳಿಯ ಸಂದರ್ಭ ಸ್ಥಳದಲ್ಲಿದ್ದ ಯಾವುದೇ ಮಾನ್ಯ ಬಿಲ್‌ಗಳಿಲ್ಲದ 1.53 ಲಕ್ಷ ರೂ.ಗಳ 52 ಬಾಕ್ಸ್‌ಗಳ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Also Read  ಆನ್‌ಲೈನ್‌ ಮೂಲಕ ಮನೆ ಮನೆಗೆ ಮಧ್ಯ ಪೂರೈಕೆಗೆ ಸರ್ಕಾರ ಚಿಂತನೆ ➤ ಆಗಸ್ಟ್‌ನಿಂದ ಹೋಂ ಡೆಲಿವರಿ ಸೇವೆ ಜಾರಿ ಸಾಧ್ಯತೆ

error: Content is protected !!
Scroll to Top