ಮಾಸ್ಕ್ ಧರಿಸಿ ಪೇಟೆಗೆ ಬಂದ ನಾಯಿ | ಮಾಸ್ಕ್ ಧರಿಸದೆ ಬರುವವರನ್ನು ಅಣಕಿಸುವ ಚಿತ್ರ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.30. ಕೊರೋನಾ ಸೋಂಕು ದೇಶದೆಲ್ಲೆಡೆ ಹಬ್ಬುತ್ತಿದ್ದರೂ, ಮಾಸ್ಕ್ ಧರಿಸದೆ ತಿರುಗಾಡುವವರನ್ನು ಅಣಕಿಸುವಂತಹ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲೀಕ ಪ್ರವೀಣ್ ಡಿಸೋಜಾ ಅವರು ತನ್ನ ಸಾಕು ನಾಯಿಗೆ ಮಾಸ್ಕ್ ಹಾಕಿಸಿ ಪೇಟೆಗೆ ಕರೆದುಕೊಂಡು ಬಂದಿದ್ದು, ಇದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು‌. ನಾಯಿಗೆ ಕೊರೋನಾ ತಗಲಬಾರದು ಎನ್ನುವ ದೃಷ್ಟಿಯಿಂದ ಮಾಸ್ಕ್ ಹಾಕಿಸಿ ಪೇಟೆಗೆ ಕರೆದುಕೊಂಡು ಬರಲಾಗಿತ್ತು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತ ಸರ್ಕಾರದ ಕಠಿಣ ನಿಯಮವನ್ನು ಉಲ್ಲಂಘಿಸುವವರಿಗೆ ಮಾಸ್ಕ್ ಧರಿಸಲು ಪ್ರೇರೇಪಿಸುವ ರಾಯಭಾರಿಯ ತರಹ ನಾಯಿಯು ಮಾಸ್ಕ್ ನ ಮಹತ್ವವನ್ನು ಸಾರಿ ಹೇಳಿದಂತಿತ್ತು. ಎರಡು ವರ್ಷ ಪ್ರಾಯದ ಹಗ್ ತಳಿಯ ಈ ನಾಯಿಯು ಯಾವುದೇ ಕಿರಿಕಿರಿಯಿಲ್ಲದೆ ಮಾಸ್ಕ್ ಹಾಕಿಕೊಂಡಿದ್ದು, ಮಾಸ್ಕ್ ಹಾಕಿದರೆ ಉಸಿರಾಟಕ್ಕೆ ತೊಂದೆಯಾಗುತ್ತದೆ ಅನ್ನುವ ಜನರಿಗೆ ಮಾದರಿಯಂತಿತ್ತು‌.

Also Read  ಜೂನ್ 07 ರಿಂದ ಕೆಎಸ್ಸಾರ್ಟಿಸಿ ಉಚಿತ ಬಸ್ ಪಾಸ್ ವಿತರಣೆ

 

 

 

error: Content is protected !!
Scroll to Top