ರಾಮಕುಂಜ: ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಅಂಗಾರರಿಂದ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಕಡಬ, ಜೂ.09. ಲೋಕೋಪಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆಯ 10 ಲಕ್ಷ ರೂ. ಅನುದಾನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ರಾಮಕುಂಜ ಗ್ರಾಮದ ಅಂಬೇಡ್ಕರ್ ನಗರ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಸುಳ್ಯ ಶಾಸಕ ಎಸ್. ಅಂಗಾರರವರು ಶಿಲಾನ್ಯಾಸ ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಬಿಜೆಪಿ ನೆಲ್ಯಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ತಾ.ಪಂ. ಸದಸ್ಯೆಯರಾದ ಜಯಂತಿ ಆರ್. ಗೌಡ, ತೇಜಸ್ವಿನಿ ಶೇಖರ ಗೌಡ, ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಆರ್.ಕೆ, ಸದಸ್ಯರುಗಳಾದ ಕೇಶವ ಗಾಂಧಿಪೇಟೆ, ಸುಶೀಲಾ ವಳೆಂಜ, ಪ್ರೇಮಾಲತಾ, ಆಲಂಕಾರು ಸಿಎ ಬ್ಯಾಂಕಿನ ನಿರ್ದೇಶಕ ಮೋನಪ್ಪ ಬೊಳ್ಳರೋಡಿ, ಸ್ಥಳೀಯ ಪ್ರಮುಖರಾದ ಡಾ. ರವಿಶಂಕರ್, ದಿವಾಕರ ರಾವ್, ಚಿತ್ತರಂಜನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Also Read  ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ JOB OFFER..! ಭಾರತೀಯ ಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ

error: Content is protected !!
Scroll to Top