ಕಡಬ ತಾಲೂಕಿನಲ್ಲಿ ಕೊರೋನಾ ಆರ್ಭಟ ➤ ಕಡಬದಲ್ಲಿಂದು ಇಂದು 30 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಎ.29. ಗ್ರಾಮೀಣ ಭಾಗದಲ್ಲಿ ಕೊರೋನಾ ಆರ್ಭಟ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯ ವರದಿಯಂತೆ ಎಪ್ರಿಲ್ 29 ರಂದು ಕಡಬ ತಾಲೂಕಿನಲ್ಲಿ 30 ಮಂದಿಗೆ ಕೊರೋನಾ ದೃಢಪಟ್ಟಿದೆ.

ಕಡಬ ತಾಲೂಕಿನ ಪೆರಿಯಡ್ಕದ 28 ವರ್ಷದ ಯುವತಿ, 65 ವರ್ಷದ ಮಹಿಳೆ, ಬಜತ್ತೂರಿನ 36 ವರ್ಷದ ಮಹಿಳೆ, ಕಾಯಿಮಣದ 6 ವರ್ಷದ ಬಾಲಕ, 3 ವರ್ಷದ ಹೆಣ್ಣು ಮಗು, 29 ವರ್ಷದ ಯುವತಿ, 57 ವರ್ಷದ ಮಹಿಳೆ, 38 ವರ್ಷದ ಮಹಿಳೆ, ಶಿರಾಡಿಯ 10 ವರ್ಷದ ಬಾಲಕ, 1 ವರ್ಷದ ಗಂಡು ಮಗು, ಕುಟ್ರುಪ್ಪಾಡಿಯ 29 ವರ್ಷದ ಯುವಕ, 63 ವರ್ಷದ ವ್ಯಕ್ತಿ, ಕೊಣಾಜೆ ಕಡ್ಯದ 27 ವರ್ಷದ ಯುವತಿ, 33 ವರ್ಷದ ವ್ಯಕ್ತಿ, ನೆಲ್ಯಾಡಿಯ 27 ವರ್ಷದ ಯುವಕ, 43 ವರ್ಷದ ವ್ಯಕ್ತಿ, 60 ವರ್ಷದ ಮಹಿಳೆ, 5 ವರ್ಷದ ಬಾಲಕ, 29 ವರ್ಷದ ಯುವಕ, 30 ವರ್ಷದ ಮಹಿಳೆ, 22 ವರ್ಷದ ಯುವಕ, ಚಾರ್ವಾಕದ 75 ವರ್ಷದ ಮಹಿಳೆ, ಕುಟ್ರುಪ್ಪಾಡಿಯ 30 ವರ್ಷದ ವ್ಯಕ್ತಿ, ಬಲ್ಯದ 24 ವರ್ಷದ ಯುವಕ, 26 ವರ್ಷದ ಯುವತಿ, ಬಿಳಿನೆಲೆಯ 66 ವರ್ಷದ ವ್ಯಕ್ತಿ, 34 ವರ್ಷದ ವ್ಯಕ್ತಿ, 51 ವರ್ಷದ ಮಹಿಳೆ, ಕಾಣಿಯೂರಿನ 24 ವರ್ಷದ ಯುವತಿ, 60 ವರ್ಷದ ಮಹಿಳೆಗೆ ಕೊರೋನಾ ದೃಢಗೊಂಡಿದೆ.

Also Read  ಬಾಳ ಗ್ರಾ.ಪಂ- ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ

 

 

error: Content is protected !!
Scroll to Top