ಮರ್ಧಾಳ: ದುರ್ವರ್ತನೆ ತೋರಿದ ನಾಲ್ವರು ಯುವಕರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ. 27. ಮರ್ದಾಳದಲ್ಲಿ ಪೊಲಿಸರೊಂದಿಗೆ ದುರ್ವರ್ತನೆ ತೋರಿದ ನಾಲ್ವರು ಯುವಕರನ್ನು ಕಡಬ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.


ಮರ್ದಾಳ ಪೇಟೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ನಾಲ್ವರು ಯುವಕರು ಬೈಕಿನಲ್ಲಿ ಬಂದಿದ್ದು, ಈ ವೇಳೆ ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸಲಿಲ್ಲ ಎಂಬ ಕಾರಣಕ್ಕೆ ಪ್ರಶ್ನಿಸಿದ ಪೊಲೀಸರೊಂದಿಗೆ ಮಾತಿಗಿಳಿದ ಯುವಕರು ಎಸ್.ಐ. ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಬಳಿಕ ಎಸ್.ಐ ರುಕ್ಮ ನಾಯ್ಕ್ ಸ್ಥಳಕ್ಕೆ ತೆರಳಿ ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Also Read  ಕೋವಿಡ್‌ಗೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ವಿಧಿವಶ

error: Content is protected !!
Scroll to Top