ಆಕ್ಸಿಜನ್ ಕೊರತೆಯ ನಡುವೆ ಮನೆಯಲ್ಲೇ ಅಕ್ರಮ ಆಕ್ಸಿಜನ್ ಸಿಲಿಂಡರ್ ಮಾರಾಟ ➤ ಆರೋಪಿ ಅಂದರ್, 48 ಸಿಲಿಂಡರ್ ವಶ

(ನ್ಯೂಸ್ ಕಡಬ) newskadaba.com ನವದೆಹಲಿ, ಎ. 24. ಮನೆಯಲ್ಲೇ ಅಕ್ರಮವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟು ಹೆಚ್ಚಿನ ಬೆಲೆಗೆ ವ್ಯಾಪಾರ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ಅನಿಲ್ ಕುಮಾರ್​​ ಎಂದು ಗುರುತಿಸಲಾಗಿದೆ. ಈ ಕುರಿತಂತೆ ನಿಖರ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ದೆಹಲಿಯ ದಶರತ್​ಪುರ ಪ್ರದೇಶದ ಮನೆಯೊಂದರಲ್ಲಿ ತಲಾ 67 ಲೀಟರ್ ಸಾಮರ್ಥ್ಯವುಳ್ಳ 32 ದೊಡ್ಡ ಹಾಗೂ ತಲಾ 10 ಲೀಟರ್​ ಸಾಮರ್ಥ್ಯದ 16 ಸಣ್ಣ ಆಕ್ಸಿಜನ್​ ಸಿಲಿಂಡರ್​​ಗಳು ಪತ್ತೆಯಾಗಿವೆ. ಆರೋಪಿಯು ದೊಡ್ಡ ಸಿಲಿಂಡರ್‌ಗಳಿಂದ ಸಣ್ಣ ಸಿಲಿಂಡರ್‌ಗಳಿಗೆ ಆಮ್ಲಜನಕ ತುಂಬಿಸಿ, ಪ್ರತಿ ಸಿಲಿಂಡರ್​ಗೆ 12,500 ರೂಪಾಯಿಯ ಹಾಗೆ ಮಾರಾಟ ಮಾಡುತ್ತಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಇದೀಗ ಸಿಲಿಂಡರ್​ಗಳನ್ನು ವಶಪಡಿಸಿಕೊಂಡ ನ್ಯಾಯಾಲಯವು ಇವುಗಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಲು ಸೂಚಿಸಲಿದೆ.

Also Read  ವಿಟ್ಲ: ಕೊಕ್ಕೊ ಗಿಡ ಕಡಿದ ವಿಚಾರ -ಮಹಿಳೆಗೆ ಹಲ್ಲೆ

error: Content is protected !!
Scroll to Top