ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲು

(ನ್ಯೂಸ್ ಕಡಬ) newskadaba.com ಮೈಸೂರು, ಎ. 23. ಕಾವೇರಿ ನದಿಯಲ್ಲಿ ಈಜಲೆಂದು ತೆರಳಿದ್ದ ನಾಲ್ವರು ಮಕ್ಕಳು ನೀರು ಪಾಲಾದ ಘಟನೆ ನರಸೀಪುರ ತಾಲೂಕಿನ ತಲಕಾಡು ಬಳಿಯ ಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ.

ನೀರು ಪಾಲಾದವರನ್ನು ರಾಜು ಎಂಬವರ ಪುತ್ರ ಯಶವಂತ ಕುಮಾರ್ (15), ಮಹದೇವ ಪ್ರಸಾದ್ (14), ಮಲ್ಲಿಕಾರ್ಜುನ ಎಂಬವರ ಪುತ್ರ ಆಕಾಶ್ (15) ಹಾಗೂ ನಿಂಗರಾಜು ಎಂಬವರ ಪುತ್ರ ಕಿಶೋರ್ (13) ಎಂದು ಗುರುತಿಸಲಾಗಿದೆ. ನಾಲ್ವರು ಮಕ್ಕಳ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಹಾಗೂ ಮುಳುಗು ತಜ್ಞರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಕುರಿತು ತಲಕಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬೆಳ್ತಂಗಡಿ: ಮನೆಯೊಳಗೆ ಬೃಹತ್ ಕಾಳಿಂಗ ಸರ್ಪ ಪತ್ತೆ..!

error: Content is protected !!
Scroll to Top