ಸಿಡಿಲು ಬಡಿದು ಮನೆ ಕುಸಿತ ➤ ಮನೆಯೊಳಗಿದ್ದ 7 ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಎ. 22. ಸಿಡಿಲು ಬಡಿದ ಪರಿಣಾಮ ಮನೆಯೊಂದು ಕುಸಿದು ಬಿದ್ದು, ಮನೆಯಲ್ಲಿದ್ದ 7 ಮಂದಿ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸೋಮಯಾಜಲ ಹಳ್ಳಿಯಲ್ಲಿ ನಡೆದಿದೆ.

ಗಾಯಗೊಂಡವರನ್ನು ಜಗ್ಗಣ್ಣ(60), ಅಂಬರೀಶ್ (32), ಗಾಯತ್ರಿ (28), ಗೌತಮ್ (3), ವಾಣಿಶ್ರೀ (6), ದರ್ಶನ್ (1) ಹಾಗೂ ಲಾವಣ್ಯ ( 4) ಎಂದು ಗುರುತಿಸಲಾಗಿದೆ. ಸಂಜೆಯ ವೇಳೆ ಸುರಿದ ಮಳೆಗೆ ಚಪ್ಪಡಿ ಕಲ್ಲಿನ ಮನೆಗೆ ಸಿಡಿಲು ಬಡಿದಿದೆ. ಪರಿಣಾಮ ಮನೆ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಕೇವಲ 699 ರೂ. ಮುಂಗಡ ಪಾವತಿಸಿ, ನಿಮ್ಮಿಷ್ಟದ ಟಿವಿಎಸ್ ವಾಹನವನ್ನು ಖರೀದಿಸಿ ➤ ಕಡಬದ ಅಡಿಗ ಮೋಟಾರ್ಸ್ ನಲ್ಲಿ ದಸರಾ ವಿಶೇಷ ಆಫರ್

error: Content is protected !!
Scroll to Top