ಅನ್ನಭಾಗ್ಯಕ್ಕೆ ಕನ್ನ ಹಾಕಿ ಗಾಯದ ಮೇಲೆ ಬರೆ ಎಳೆದ ಸರಕಾರ ➤ ಇನ್ಮುಂದೆ ಬರೀ 2 ಕೆಜಿ ಅಕ್ಕಿ..‼️

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.22. ಕೊರೋನಾ ಸಂಕಷ್ಟದ ನಡುವೆ ಅನ್ನಭಾಗ್ಯ ಅಕ್ಕಿಗೆ ಸರಕಾರವು ಕನ್ನ ಹಾಕಿದ್ದು, ಈ ತಿಂಗಳಿನಿಂದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯ ಬದಲಾಗಿ 2 ಕೆಜಿ ಅಕ್ಕಿ ವಿತರಿಸಲು ಸರಕಾರವು ಮುಂದಾಗಿದೆ.

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಡ ಜನತೆಯ ಹಸಿವು ನೀಗಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಪ್ರತೀ ತಿಂಗಳು ಓರ್ವ ಸದಸ್ಯನಿಗೆ ತಲಾ 7 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ತದ ನಂತರ ಯಡಿಯೂರಪ್ಪ ಸರಕಾರದಲ್ಲಿ 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ 5 ಕೆಜಿಗೆ ಇರಿಸಲಾಗಿತ್ತು. ಇದೀಗ ಮತ್ತೆ 3 ಕೆಜಿ ಅಕ್ಕಿಯನ್ನು ಕಡಿತಗೊಳಿಸಲಾಗಿದ್ದು, ಇನ್ಮುಂದೆ ಕೇವಲ 2 ಕೆಜಿ ಅಕ್ಕಿ ದೊರೆಯಲಿದೆ. ವ್ಯತ್ಯಾಸವನ್ನು ಸರಿದೂಗಿಸಲು ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳವನ್ನು ನೀಡುತ್ತಿದೆ. ಕೋವಿಡ್‌ ಸಂಕಷ್ಟ ಸಮಯದಲ್ಲಿ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿರುವುದಕ್ಕೆ ಹಲವು ಕಾರ್ಡ್‌ ದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Also Read  ಮಂಗಳೂರು: ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ ಬಿಜೆಪಿ ರಾಜ್ಯಾಧ್ಯಕ್ಷರು ➤ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

 

 

 

error: Content is protected !!
Scroll to Top