ಶಿರಾಡಿ: ಮರಕ್ಕೆ ಢಿಕ್ಕಿ ಹೊಡೆದ ಕಂಟೇನರ್ ➤ ಚಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ. 22. ಕಂಟೇನರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಯ ಕೊಡ್ಡೆಕಲ್ ಎಂಬಲ್ಲಿ ನಡೆದಿದೆ.

ಮೃತ ಚಾಲಕನನ್ನು ಜಾರ್ಖಂಡ್ ಮೂಲದ ನುಸ್ರಲ್ಲಾಖಾನ್ (31) ಎಂದು ಗುರುತಿಸಲಾಗಿದೆ. ಇದು ಕಾರುಗಳನ್ನು ಸಾಗಿಸುವ ಕಂಟೇನರ್ ಆಗಿದ್ದು, ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಗುರುವಾ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಶಿರಾಡಿ ಘಾಟ್ ನ ಕೊಡ್ಡೆಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದು ಮರಕ್ಕೆ ಢಿಕ್ಕಿ ಹೊಡೆದಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬ: ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ ಬಳಕೆಯ ಆರೋಪ ➤ ಹಿಂದೂ ಸಂಘಟನೆಯಿಂದ ಕಡಬ ಪೊಲೀಸರಿಗೆ ದೂರು

error: Content is protected !!
Scroll to Top