ತಂದೆಯ ಮೃತದೇಹ ಸಾಗಿಸಲು 60 ಸಾವಿರ ರೂ ಬೇಡಿಕೆಯಿಟ್ಟ ಅಂಬ್ಯುಲೆನ್ಸ್ ಸಿಬ್ಬಂದಿ…! ➤ ಮಾಂಗಲ್ಯ ಮಾರಲು ಮುಂದಾದ ಮಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 22. ಕೊರೋನಾದಿಂದ ಮೃತಪಟ್ಟ ತಂದೆಯ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್‌ ಸಿಬಂದಿಯೋರ್ವ 60 ಸಾವಿರ ರೂ. ಕೇಳಿದ ಹಿನ್ನೆಲೆ ಮಹಿಳೆಯೊಬ್ಬಳು ಮಾಂಗಲ್ಯ ಮಾರಿ ಹಣ ನೀಡಲು ಮುಂದಾದ ಘಟನೆ ನಗರದ ಹೆಬ್ಬಾಳದಲ್ಲಿ ನಡೆದಿದೆ.


ಮೃತದೇಹವನ್ನು ನಗರದ ಹೆಬ್ಬಾಳದಿಂದ ಪೀಣ್ಯ ಎಂಬಲ್ಲಿನ ಚಿತಾಗಾರಕ್ಕೆ ಸಾಗಿಸಬೇಕಾಗಿತ್ತು. ಇದಕ್ಕಾಗಿ ನಿಗದಿಪಡಿಸಿದ್ದ ಆ್ಯಂಬುಲೆನ್ಸ್‌ ಸಿಬ್ಬಂದಿ 60 ಸಾ.ರೂ. ನೀಡದಿದ್ದರೆ ಮೃತದೇಹವನ್ನು ಬೀದಿಯಲ್ಲೇ ಬಿಸಾಡುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ಮಾಂಗಲ್ಯವನ್ನು ಮಾರಿ ಹಣ ನೀಡಲು ಮಗಳು ಮುಂದಾಗಿದ್ದಾರೆ. ಆದರೆ ಆಂಬ್ಯುಲೆನ್ಸ್‌ ಸಿಬಂದಿ, ತಮಗೆ ಆಭರಣ ಬೇಡ, ಹಣ ಬೇಕು, ಈಗ ಇಲ್ಲದಿದ್ದರೆ ನಾಳೆ ಬೆಳಗ್ಗೆ ನೀಡಿ ಎಂದು ಹೇಳಿದ್ದಾರೆ.

Also Read  ಸೈಬರ್ ಕ್ರೈಂ- ಪಾರ್ಟ್‌ಟೈಮ್ ಜಾಬ್ ನೆಪದಲ್ಲಿ ವಂಚನೆ; ಪ್ರಕರಣ ದಾಖಲು

error: Content is protected !!
Scroll to Top