ಹೈಕೋರ್ಟ್ ಸೂಚನೆಯಂತೆ ಕೊನೆಗೂ ಅಂತ್ಯ ಕಂಡ ಸಾರಿಗೆ ನೌಕರರ ಮುಷ್ಕರ ➤ ರಾಜ್ಯಾದ್ಯಂತ ಬಸ್ ಸಂಚಾರ ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಏ. 22. 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ, ಕಳೆದ 15 ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಬುಧವಾರ ಅಂತ್ಯ ಕಂಡಿದೆ. ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಸಂಜೆಯಿಂದಲೇ ಬಸ್ಸುಗಳ ಸಂಚಾರ ಆರಂಭವಾಗಿದ್ದು, ನಾಳೆಯಿಂದ ಎಲ್ಲಾ ಬಸ್‌ ಗಳು ಸಂಚಾರ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.

ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕೋರ್ಟ್ ನೀಡಿದ ಆದೇಶವನ್ನು ಗೌರವಿಸಿ ಈ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಕೊರೋನಾ ಹಿನ್ನೆಲೆ ಮುಷ್ಕರ ನಡೆಸದೇ ಕರ್ತವ್ಯಕ್ಕೆ ಹಾಜರಾಗಲು ನ್ಯಾಯಮೂರ್ತಿಗಳು ಸೂಚಿಸಿದ್ದು, ಅವರ ಸೂಚನೆಗೆ ಗೌರವ ನೀಡಿ ಹೈಕೋರ್ಟ್ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ತಿಳಿಸಿದರು.

Also Read  ಕೆ.ಎಸ್.ಆರ್.ಟಿ.ಸಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ಅಲ್ಲದೇ ಮುಷ್ಕರದ ಸಂದರ್ಭ 2169 ನೌಕರರ ವಜಾ, 2941 ನೌಕರರ ಅಮಾನತು ಹಾಗೂ 7646 ನೌಕರರಿಗೆ ಶೋಕಾಸ್ ನೋಟಿಸ್ ನೀಡಿ, 8 ಸಾವಿರ ನೌಕರರನ್ನು ವರ್ಗಾವಣೆ ಮಾಡಿದೆ. ರಾಜ್ಯ ಸರ್ಕಾರವು ಈ ಎಲ್ಲಾ ನಿರ್ಧಾರಗಳನ್ನು ಹಿಂಪಡೆಯಬೇಕು. ನೌಕರರ ವಿರುದ್ಧ ಕೈಗೊಂಡ ಕ್ರಮಗಳನ್ನು ಕೈಬಿಡಬೇಕು ಎಂದು ಹೇಳಿದರು.

error: Content is protected !!
Scroll to Top