ರಾಜ್ಯದಲ್ಲಿ ಕೊರೋನಾ ಟಫ್ ರೂಲ್ಸ್ ➤ ವೀಕೆಂಡ್ ಫುಲ್‌ ಕರ್ಫ್ಯೂ, ಉಳಿದ ದಿನ ನೈಟ್ ಕರ್ಫ್ಯೂ



(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.20. ರಾಜ್ಯದಲ್ಲಿ ಕೊರೋನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸರಕಾರವು ಟಫ್ ರೂಲ್ಸ್ ಜಾರಿಗೊಳಿಸಿದ್ದು, ವೀಕೆಂಡ್ ಸಂಪೂರ್ಣ ಕರ್ಫ್ಯೂ ಹಾಗೂ ಉಳಿದ ದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ.





ನಾಳೆಯಿಂದ ಆರಂಭಗೊಂಡು ಮೇ ತಿಂಗಳ 4ರ ತನಕ ಒಟ್ಟು ಹದಿನಾಲ್ಕು ದಿನಗಳ ಕಾಲ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ‌. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.






 

 

error: Content is protected !!
Scroll to Top