ಕಾರ್ಕಳ: ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿದ್ದ ದನ ಕಳ್ಳತ‌ನ

(ನ್ಯೂಸ್ ಕಡಬ) newskadaba.com ಕಾರ್ಕಳ, ಎ. 17. ಹಟ್ಟಿಯಲ್ಲಿ ಕಟ್ಟಿದ್ದ ದನವನ್ನು ಕಳ್ಳತನ ಮಾಡಿರುವ ಘಟನೆ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ನಡೆದಿದೆ.


ಸುನೀಲ್ ಕೋಟ್ಯಾನ್ ಎಂಬವರ ಮನೆಯಿಂದ ದನ ಕಳವುಗೈಯ್ಯಲಾಗಿದೆ. ಇವರು ವೃತ್ತಿಯಲ್ಲಿ ಕೃಷಿಕರಾಗಿದ್ದು, ಜೀವನ ನಿರ್ವಹಣೆಗಾಗಿ 6 ದನಗಳನ್ನು ಸಾಕಿಕೊಂಡಿದ್ದರು. ಎ.12 ರಂದು ರಾತ್ರಿ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಇವರು, ಮರುದಿನ ಬೆಳಿಗ್ಗೆ ಹಾಲು ಕರೆಯಲೆಂದು ಹೋದ ಸಂದರ್ಭ ಕಟ್ಟಿ ಹಾಕಿದ್ದ 6ದನಗಳ ಪೈಕಿ ಐದು ದನ ಮಾತ್ರ ಇದ್ದು 1 ದನ ಕಳವಾಗಿರುವುದು ತಿಳಿದು ಬಂದಿದೆ. ಕಳವಾದ ದನದ ಒಟ್ಟು ಮೌಲ್ಯ ರೂ. 20,000 ಎನ್ನಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  OTS ಗಡುವು ಅಂತ್ಯ: BBMPಯಿಂದ ದಾಖಲೆಯ 4,284 ಕೋಟಿ ರೂ.ತೆರಿಗೆ ಸಂಗ್ರಹ

error: Content is protected !!