ವಿಟ್ಲ: ಅಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ ➤ 30 ಕೆಜಿ ಮಾಂಸದ ಸಹಿತ ಅಟೋ ರಿಕ್ಷಾ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಎ. 17. ಆಟೋ ರಿಕ್ಷಾದಲ್ಲಿ ಅಕ್ರಮವಾಗಿ 30ಕೆಜಿ ಗೋಮಾಂಸ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವ್ಯಕ್ತಿಯನ್ನು ವಶಕ್ಕೆ ಪಡೆದ ಘಟನೆ ವಿಟ್ಲ ಪೊಲೀಸ್ ಠಾಣೆಯ ಸಾರಡ್ಕ ಚೆಕ್ ಪೋಸ್ಟ್‌ ನಲ್ಲಿ ನಡೆದಿದೆ.


ಬಂಧಿತನನ್ನು ಬದಿಯಡ್ಕ ಚೆನ್ನರಕಟ್ಟೆ ನಿವಾಸಿ ಲಿಜೋ ಜಾರ್ಜ್ (35) ಎಂದು ಗುರುತಿಸಲಾಗಿದೆ. ಪೊಲೀಸರು ಕೇಪು ಗ್ರಾಮದ ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ತಪಾಸಣಾ ನಿರತರಾಗಿದ್ದ ಸಂದರ್ಭ ಪೆರ್ಲ ಕಡೆಯಿಂದ ಅಡ್ಯನಡ್ಕ ಕಡೆಗೆ ಆಟೋರಿಕ್ಷಾದಲ್ಲಿ ದಾಖಲಾತಿ ಇಲ್ಲದೆ ಅಕ್ರಮವಾಗಿ ದನದ ಮಾಂಸದ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ರಿಕ್ಷಾದ ಹಿಂದುಗಡೆ ಪ್ಲಾಸ್ಟಿಕ್ ಕವರ್ ನಲ್ಲಿ ತಲಾ 1 ಕೆಜಿಯ 30 ಕಟ್ಟುಗಳಿದ್ದು, ಮಾಂಸದ ಸಹಿತ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Also Read  ಓವರ್ ಟೇಕ್ ಭರದಲ್ಲಿ ಸರಣಿ ಅಪಘಾತ - ನಾಲ್ವರಿಗೆ ಗಾಯ

error: Content is protected !!
Scroll to Top