ಹೆಚ್ಚುತ್ತಿರುವ ಕೊರೊನಾ‌ ಹಿನ್ನೆಲೆ ➤ ಇಂದಿನಿಂದ ಕೊರೋನಾ ಸೋಂಕಿತರ ಕೈಗೆ ಬೀಳಲಿದೆ ಸೀಲ್…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 17. ಕೊರೋನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯದಲ್ಲಿ ಸೋಂಕು ದೃಢಪಟ್ಟವರ ಕೈಗಳಿಗೆ ಕೋವಿಡ್ ದೃಢಪಟ್ಟಿದೆ ಎಂಬ ಸೀಲ್ ಹಾಕಲು ನಿರ್ಧರಿಸಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.


ಕೊರೊನಾ ಸೋಂಕಿನ ಹಿನ್ನೆಲೆ ಮನೆಯಲ್ಲಿಯೇ ಐಸೋಲೇಟ್ ಆಗಿರುವವರು ಮನೆಯಿಂದ ಹೊರಗೆ ಸಂಚರಿಸದಂತೆ ಮುದ್ರೆ ಹಾಕಲಾಗುತ್ತದೆ. ಮುದ್ರೆ ಹಾಕಿಸಿಕೊಂಡವರು ಹೊರಗಡೆ ತಿರುಗಾಡುವುದು ಕಂಡಲ್ಲಿ ಮಾರ್ಷಲ್ ಗಳು, ಪೊಲೀಸರು, ಗೃಹ ರಕ್ಷಕರು, ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

Also Read  ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ

error: Content is protected !!
Scroll to Top