(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ. 17. ಕೆಲಸಕ್ಕಾಗಿ ಬಂದು ಮೋಸ ಹೋದ ಮಹಾರಾಷ್ಟ್ರದ 24 ಕಾರ್ಮಿಕರು ಮೂಡಿಗೆರೆಯಿಂದ ಉಜಿರೆಗೆ ಬಂದು, ಕಾಲ್ನಡಿಗೆ ಮೂಲಕ ಲಾಯಿಲ ಪ್ರದೇಶಕ್ಕೆ ತಲುಪಿದ್ದರು. ಊರಿಗೆ ಹಿಂದಿರುಗಲು ಲಾಯಿಲ ಬಳಿ ನಾಗರಿಕರಲ್ಲಿ ಸಹಾಯ ಯಾಚಿಸುತ್ತಿರುವ ವಿವರ ತಿಳಿದ ಪಾಪ್ಯುಲರ್ ಫ್ರಂಟ್ ಲಾಯಿಲ ಕಾರ್ಯಕರ್ತರಾದ ಲಾಯಿಲ ಸಲೀಂ, ಇರ್ಫಾನ್, ಆಸೀಫ್ ಹಾಗೂ ಸಫ್ವಾನ್ ಒಳಗೊಂಡ ತಂಡವು ಅವರಿಗೆ ಊಟ ಉಪಚಾರ ಮಾಡಿಸಿ, ಧನ ಸಹಾಯವನ್ನು ನೀಡಿ ತಮ್ಮ ಊರಿಗೆ ಹಿಂತಿರುಗುವ ವ್ಯವಸ್ಥೆ ಮಾಡಿದರು.
ಮಹಾರಾಷ್ಟ್ರದ ನಿರುದ್ಯೋಗಿ ಕಾರ್ಮಿಕರಿಗೆ ನೆರವಾದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು
