ಗಾಢ ನಿದ್ರೆಯಲ್ಲಿದ್ದ ವೇಳೆ ಮನೆಯಲ್ಲಿ ಬೆಂಕಿ ಅವಘಡ ➤ ಒಂದೇ ಕುಟುಂಬದ ನಾಲ್ವರು ಸಜೀವ ದಹನ

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಎ. 16. ಮನೆಯೊಂದರಲ್ಲಿ ನಡೆದ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದಿದೆ.

ಮೃತಪಟ್ಟವರನ್ನು ವಿಶಾಖಪಟ್ಟಣಂನ ಮಿಥಿಲಾಪುರಿ ಉಡಾ ನಗರದ ನಿವಾಸಿ ಬಂಗಾರು ನಾಯ್ಡು (50), ಪತ್ನಿ ಡಾ.ನಿರ್ಮಲಾ (45) ಮಕ್ಕಳಾದ ದೀಪಕ್ (22) ಹಾಗೂ ಕಶ್ಯಪ್ (19) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ನೆಲೆಸಿದ್ದ ಈ ಕುಟುಂಬ ಕಳೆದ 8 ತಿಂಗಳಿನಿಂದ ವಿಶಾಖಪಟ್ಟಣಂ ನ ಆದಿತ್ಯ ಟವರ್ಸ್ ನಲ್ಲಿ ವಾಸಿಸುತ್ತಿತ್ತು. ಆದರೆ ಮನೆಯಲ್ಲಿ ಹೇಗೆ ಬೆಂಕಿ ಕಾಣಿಸಿಕೊಂಡಿದೆ ಅನ್ನೋದು ಇನ್ನು ತಿಳಿದು ಬರಬೇಕಿದೆ.

Also Read  ಹಣಕಾಸಿನ ವ್ಯವಹಾರ ನಿಮ್ಮಂತೆಯೇ ಆಗಬೇಕು ಸಾಲದ ಸಮಸ್ಯೆಗಳು ನಿವಾರಣೆಯಾಗಬೇಕು ಕಷ್ಟಗಳು ಪರಿಹಾರ ಆಗಬೇಕೆಂದರೆ ಈ ನಿಯಮವನ್ನು ಪಾಲಿಸಿ

 

 

error: Content is protected !!
Scroll to Top