ಪ್ರೇಮ ಪ್ರಕರಣ ➤ 17 ವರ್ಷದ ಬಾಲಕನ ಹತ್ಯೆಗೈದ ಬಾಲಕಿಯ ತಂದೆ

(ನ್ಯೂಸ್ ಕಡಬ) newskadaba.com ಮಂಡ್ಯ, ಎ. 16. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಬಾಲಕನೋರ್ವನನ್ನು ಭೀಕರ ಹತ್ಯೆ ಮಾಡಿರುವ ಘಟನೆ ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಕಲ್ಲಹಳ್ಳಿಯ 17 ವರ್ಷದ ಬಾಲಕನೋರ್ವ ಅದೇ ಬಡಾವಣೆಯ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಈ ವಿಚಾರ ತಿಳಿದ ಬಾಲಕಿಯ ಮನೆಯವರು ಬುಧವಾರದಂದು ರಾತ್ರಿ ಬಾಲಕನನ್ನು ಮನೆಗೆ ಕರೆದು ಆತನಿಗೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಯುವತಿಯ ತಂದೆ ಶಿವಲಿಂಗು ವಿರುದ್ದ ಮೃತ ಬಾಲಕನ ಮನೆಯವರು ಗಂಭೀರ ಆರೋಪ ಹೊರಿಸಿ, ಹಲ್ಲೆ ನಡೆಸಿದ ಶಿವಲಿಂಗುವನ್ನು ಬಂಧಿಸಲು ಬಾಲಕಿ ಮನೆ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

Also Read  ಬೆಳ್ತಂಗಡಿ: ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

error: Content is protected !!
Scroll to Top